ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/85

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಇತ್ಯಾದಿಗಳೂ ನಾಜೂಕು ಮಾದ್ರಿಯಲ್ಲಿ ತಯಾರಿಸಲ್ಪಟ್ಟು, ಯಾವಾಗಲೂ ಮಾರಾಟಕ್ಕೆ (ಮೊದಲಿಗಿಂತ ಕಮ್ಮಿ ದರದಲ್ಲಿ) ತಯಾರಿರುತ್ತವೆ.ರೂಪಾಯಿ 100ರ ಮೇಲೆ ಬಟ್ಟೆಗಳನ್ನು ತೆಗೆದುಕೊಳ್ಳುವ ಗಿರಾಕಿಗಳಿಗೆ ಯಾ ಸಾಹುಕಾರರಿಗೆ ಒಳ್ಳೇ ಕಮ್ಮಿಶನ್ (ವಟ್ಟಾ) ಕೊಡಲಾದೀತು. ಈ ಬಗ್ಗೆ ಖುದ್ದಾಗಿ ಯಾ ಕಾಗದ ಮೂಲಕವಾಗಿ ವಿಚಾರಿಸಿಕೊಂಡಲ್ಲಿ ಎಲ್ಲಾ ವಿವರ ತಿಳಿಸಲಾದೀತು. ಪರ ಊರಿನಲ್ಲಿ ಬಟ್ಟೆಗಳನ್ನು ತರಿಸಿಕೊಳ್ಳ ಮನಸ್ಸುಳ್ಳವರು ಮೇಲಿನ ವಿಳಾಸ ಬರಕೊಂಡಲ್ಲಿ, ಟಪಾಲ ಹಾಸಲು ಮಾಫಿಯಾಗಿ ನಮೂನೆಗಳು ಕಳುಹಿಸಲ್ಪಡುವವು.

ವ್ಯವಸಾಯಿಕ ಪಂಚಾಂಗದಲ್ಲಿ ಕೃಷಿ ಬದುಕಿಗೆ ಸಂಬಂಧಪಟ್ಟ ಕನ್ನಡ ತುಳು ಗಾದೆಗಳು

ಪಗ್ಗುಡು ಪದಿನೆ ಪೋನಗ ಬೀಜ ಬಿತ್ತೊಡು
ನವದಾನ್ಯ ಬಿತ್ತಿದವನ ಅಭಿದಾನ ದೊಡ್ಡದು
ಹದೋಟು ಬಿತ್ತಿನಾಯೆ ಬುಳಟ ಕೊಯ್ದ
ಬೇಶಡ್ ಬಿಲ್ಡ್ ಬೂರುಂಡ ಈಟ್ ಇಜ್ಯಂದೆ ಬುಳೆವು
ಪತ್ತನಾಜೆಗ್ ಪತ್ನಿ ಪಣಿಲಾ ಬರೆರೆ ಅವಂದ್
ಮೃಗಶಿರೆ ಮಳೆ ಬಂದರೆ ಮೃಗಗಳಿಗೆ ಸಹ ಮುರಿಯಲಿಕ್ಕೆ ಕೂಡದು
ಆದ್ರೆ ಮಳೆ ಸಮ ಬಂದರೆ ಅರು ನಕ್ಷತ್ರದ ಮಳೆ ಸಮ ಬಂದೀತು
ಅರ್ದ್ರೆ ಮಳೆ ಬಂದರೆ ಆದ್ದಷ್ಟು ನೋಡೇನು
ಅರ್ದ್ರೆಯಲ್ಲಿ ಆದರೆ ಅಯಿತು ಹೋದರೆ ಹೋಯಿತು
ಅರ್ದ್ರೆ ನಕ್ಷತೊಡು ಬಿತ್ತಂಡ ಅಡರ್ದಲೆಕ್ಕ ಆವು, ಪುನರ್ವಸುಡು ಬಿತ್ತಂಡ
ಪುಚ್ಚೆದ ರೋಮದ ಲೆಕ್ಕ ಆವು. ಬೇಶಡ್ ಬಿತ್ತ ಬೂರುಂಡ ಈಡ್ ಇಜ್ಯಂದೆ
ಬುಳೆವು.
ಪುನರ್ವಸು ಮಳೆ ಹೆಣಕ್ಕೆ ಸಮ
ಪುಷ್ಯ ಹೊಯಿದರೆ ಪುಷ್ಕಳ ಬೆಳೆದೀತು
ಪುಷ್ಯಡ್ ಬಿತ್ತಂಡ ಪುರಿ ಪತ್ತುಂಡು
ಪುಸ್ಕೊಡು ಬಿತ್ತಂಡ ಪುಚ್ಚೆಗ್‌ಲಾ ನುಪ್ಪು ತಿಕ್ಕಂದ್
ಆಟಿಡ್ ತೆಡ್ಲ್ ಬತ್ತಂಡ ಅಟ್ಟಪೊಲಿಪೋವು ಸೋಣೊಡು ತೆಡ್ಲ್ ಬತ್ತ್ಂಡ
ಸೊಂಟ ಪೊಲಿಪೋವು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...73