ಸರಕಾರದವರು ಮಾಡುವ ರಿಯಾಯತಿಗಳು, ಹಟ್ಟಿಕೊಟ್ಟಿಗೆಯ ಗೊಬ್ಬರವನ್ನು ಸುಕ್ಷಿತ ಪಡಿಸುವ ಕುರಿತು ಬಂಗಾಳ ಸಂಸ್ಥಾನದ ಕೃಷಿಖಾತೆಯ 1907ನೇ ಇಸವಿಯ 7ನೇ ಚಿಕ್ಕ ಪತ್ರಕ.
ನೇಜಿ ನೆಡುವ ಕ್ರಮ, ಬೈಲುಗದ್ದೆಗಳಿಗೆ ಹಸಿ ಸೊಪ್ಪುಗೊಬ್ಬರ ಹಾಕೋಣ, ತಿರುನೆಲ್ವೇಲಿ ಜಿಲ್ಲಾ ಶಿವಗಿರಿ ಜಮೀನದಾರಿಯ ಹೋಮ್ ಫಾರ್ಮ್ ಯಾನೆ ಖುದ್ದು ಸಾಗುವಳಿ ಕೃಷಿತೋಟದಲ್ಲಿ ಜಾರಿ ಇರುವ ಕಾಡುನೀಲಿ ಅಥವಾ ಕೊಳಿಂಗಿ ಎಂಬ ಗಿಡಗಳನ್ನು ಬೆಳಿಸಿ ಅವುಗಳನ್ನು ಹಸಿ ಗೊಬ್ಬರವಾಗಿ ಉಪಯೋಗಿಸುವ
ಕ್ರಮ, ಬೈಲುಗದ್ದೆಗಳಲ್ಲಿ ಹಸಿ ಸೊಪ್ಪು ಗೊಬ್ಬರದ ಮತ್ತು ಮೇವಿನ ಬಗ್ಗೆ, ಪೈರುಗಳನ್ನು ಬೆಳೆಸಲಿಕ್ಕೆ ಉತ್ಸಾಹಗೊಳ್ಳುವ ಹಾಗೆ ಸರಕಾರದವರು ಮಾಡಿದ ರಿಯಾಯಿತಿಗಳು, ಬೀಜ ಆರಿಸುವ ಕ್ರಮ, ಜಾನುವಾರುಗಳನ್ನು ಹುಟ್ಟಿಸಿ ಬೆಳೆಸುವ ವಿಷಯ, ಜಾನುವಾರುಗಳ ಪರಾಮರಿಕೆ ಮತ್ತು ಆರೈಕೆ ಕುರಿತು, ಇಂತಹ ಉಪಯುಕ್ತ ಲೇಖನಗಳಲ್ಲದೆ ಕೃಷಿಗೆ ಸಂಬಂಧಿಸಿದ ಬೀಜ ಬಿತ್ತಿ ಪಾಪ ಕಳೆ, ನವದಾನ್ಯ ಬಿತ್ತಿದವನ ಅಭಿದಾನ ದೊಡ್ಡದು, ಹದೋಟು ಬಿತ್ತಿನಾಯೆ ಬುಳೆಟ ಕೊಯ್ದೆ, ಬೇಶಡ್ ಬಿತ್ತ್ ಬೂರುಂಡ ಈಟ್ ಇಜ್ಯಂದ ಬಳೆವು, ಮೃಗಶಿರೆ ಮಳೆ ಬಂದರೆ ಮೃಗಗಳಿಗೆ ಸಹ ಮುರಿಯಲಿಕ್ಕೆ ಕೂಡದು, ಅರ್ದ್ರೆ ಮಳೆ ಸಮ ಬಂದರೆ ಆರು ನಕ್ಷತ್ರದಮಳೆ ಸಮ ಬಂದೀತು, ಅರ್ದ್ರೆ ಮಳೆ ಬಂದರೆ ಆದ್ದಷ್ಟು ನೋಡೇನು, ಅರ್ದ್ರೆಯಲ್ಲಿಆದರೆ ಅಯಿತು ಹೊದರೆ ಹೋಯಿತು, ಅರ್ದೊಡ್ ಬಿಂಡ ಅಡರ್ದ ಲೆಕ್ಕ ಅವು ಪುನರ್ವಸುಡು ಬಿತ್ತಂಡ ಪುಚ್ಚೆದ ರೋಮದ ಲೆಕ್ಕ ಆವು, ಅರ್ದ್ರೆಸ್ ಅಡರ್ದೇ ಒಯಿಪೊಡು. ಇಂತಹ ಕನ್ನಡ ಹಾಗೂ ತುಳುವಿನ ಗಾದೆಮಾತುಗಳು ಪ್ರತಿಯೊಂದು ಪುಟದಲ್ಲಿದ್ದು ಓದುಗರನ್ನು ವ್ಯಾವಹಾರಿಕ ಜ್ಞಾನದೆಡೆಗೆ ಸೆಳೆಯುತ್ತಿತ್ತು.
ಪಂಚಾಂಗದಲ್ಲಿ ಕಂಡುಬಂದ ನೇಯಿಗೆ ಕಾರ್ಖಾನೆಯ ಜಾಹಿರಾತಿನ ಒಂದು ಮಾದರಿ.
BASEL MISSION WEAVING ESGTABLISHMENT,MANGALORE, SOUTH CANARA.
ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಬಾಸೆಲ್ ಮಿಶನ್ (ಬಲ್ಮಠ) ನೆಯ್ಯುವ ಕಾರಖಾನೆಯಲ್ಲಿ ಬೇರೆ ಬೇರೆ ತರದ (ಮಿಶನ್) ಟ್ವಿಡ್ ನಮೂನೆಯ ಕೋಟು ಇಜರುಗಳ ಚೆಕ್ ಬಟ್ಟೆಗಳೂ, ಹಂಟಿಂಗ್ ಯಾ ಶಿಕಾರಿ ಬಟ್ಟೆಗಳೂ, ಶರ್ಟಿಂಗ್ ಯಾನೆ ಕಮೀಸಿನ ಬಟ್ಟೆಗಳೂ, ಶೀರೆ ದುಪ್ಪಟ, ದೋತ್ರ, ಟೇಬ್ಲ್‌ಕ್ಲೋತ್ ಯಾನೆ ಮೇಜುವಸ್ತ್ರ
ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/84
ಗೋಚರೊ
ಈ ಪುಟೊನು ಪ್ರಕಟಿಸದ್ ಆಂಡ್
72 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...