ಈ ಪುಟೊನು ಪ್ರಕಟಿಸದ್ ಆಂಡ್
ಸಿರಿಪಟ್ಟವನೇರಿದ ನೆಲದಲ್ಲಿ,
ನರಿಗಳು ನಾಯಿಗಳೋಡುತಿವೆ;
ಸಿರಿವಂತರು ಬಾಳಿದ ಮನೆಯಲ್ಲಿ,
ಹಾವು ಹೆಗ್ಗಣವು ಕೂಡುತಿವೆ.
ಅಂದಿನ ಸಂಭ್ರಮ ವಿಪುಲವೈಭವಗ-
ಳಿಂದಿಗದೆಲ್ಲವು ಬರಿ ಕನಸು!
ಹಿಂದಿನ ವೀರರ ಕತೆಗಳ ನೆನೆದೇ
ಕಂಬನಿ ಸುರಿಸುತಲೆದೆತಣಿಸು!
ದೇಶವು ಭಾಷೆಯು ನಮ್ಮದಿದೆಂದು
ಹಿಗ್ಗುವ ಕಾಲದಿ ಜನರೆಲ್ಲ;
ಈ ನಾಡಿನ ಮಂದಿಯ ಹಣೆಯಲ್ಲಿ
ಆ ಭಾಗ್ಯವ ವಿಧಿ ಬರೆದಿಲ್ಲ.
ಕಯ್ಯಾರೆಡ್ನ ಕಬಿತೆಲು / 71