ಈ ಪುಟೊನು ಪ್ರಕಟಿಸದ್ ಆಂಡ್
ಬೆಣ್ಣೆ ಬರುತಿರೆ ಮಂತು ಮುರಿಯಿತೆ?
ನಿನ್ನ ನೆಲ ಹೊರಗುಳಿಯಿತೆ?
ಹಂತ ಗೂಬೆಯ ಗುಂಪು ಗಿಳಿಗಳ
ಹಿಂಡ ಚೆದರಿಸಿ ಹೋಯಿತೆ?
ಪುಣ್ಯಸ್ಮರಣೆಗೆ ಕವನ ಪುಷ್ಪವ
ಅರ್ಪಿಸುವರೈ ಕವಿಗಳು;
ಆನು ಕಣ್ಣೀರ್ತುಂಬಿ ತಂದಿಹೆ,
ಬಾಷ್ಪ ಬಂಧುವೆ, ಕೈಕೊಳು.
ಶೋಕವೇ ಶ್ಲೋಕತ್ವ ಪಡೆಯಿತು
ಎನ್ನ ಹೃದಯದ ರಂಗದಿ,
ಕಾವ್ಯಕೌಮುದಿ ಕ್ಷೀರಸಿಂಚನ
ನಿನ್ನ ಹರಕೆಯ ಸಂಗದಿ,
ಕಯ್ಯಾರೆರ್ನ ಕಬಿತೆಲು / 69