ಈ ಪುಟೊನು ಪ್ರಕಟಿಸದ್ ಆಂಡ್
ತೌಳವರ ಇತಿಹಾಸ, ಇರುಳಲಿ
ಮುಚ್ಚಿ ಮರೆತಿರೆ, ಬೀರಿದೆ;
ಬೆಳಕನಲ್ಲಿಗೆ, ತುಳುವ ನಾಡನು
ಮೆಚ್ಚಿ ಮಮತೆಯ ತೋರಿದೆ;
ಮತ್ತೆ ಮರುಹುಟ್ಟಿದ್ದರೆನ್ನನು
ಮರುಳಿಸೌ ನಿನ್ನಂಕಕೆ -
ಎಂದು ತೌಳವ ಮಾತೆಯನು ನೀ
ಬಿನ್ನವಿಸಿದೈ ಬಿಂಕದೆ.
ಹೆತ್ತ ಕೊಂಕಣಿ ತಾಯಿ ನಿನ್ನನು
ಇತ್ತಲೈ , ತುಳುವಬ್ಬೆಗೆ,
ಹೊತ್ತು ಮೆರೆಸಿದಳಲ್ತೆ ಕನ್ನಡ
ಮಾತೆ ಬೆಳಕಿಗೆ ಹಬ್ಬುಗೆ!
ಭಾರತಾಂಬೆಯ ಭಕ್ತಿಯೆನಿತೋ
ಆತ್ಮಶಕ್ತಿಯನಿತ್ತಿತು;
ಎಲ್ಲ ತಾಯಂದಿರೆಲ್ಲ ಹರಕೆಯು
ನಿನ್ನ ಸಿರಿಮುಡಿಗೆತ್ತಿತು.
ದಾಸ್ಯದೈತ್ಯನ ಮುರಿಯೆ ಬಿಡುಗಡೆ
ದೇವರಿಗೆ ಕರೆ ನೀಡಿದೆ;
ಭರತಮಾತೆಯ ಕಂಬನಿಯ ಕಿಡಿ
ನಿನ್ನ ನುಡಿಯೊಳು ನೋಡಿದೆ.
ತೃಷೆಗೆ ಎರೆದಾ ನೀರು ಹಾ!
ಉಪ್ಪಾದುದೆನ್ನುತ ಮರುಗಿದೆ;
ರಾಹು ತೊಲಗಿಸಿ ಕೇತು ತಂದೆಯ
ತಂದೆ? ಎನ್ನುತ ಕೊರಗಿದೆ.
ಜೇನು ಸುರಿಯುವ ಹಾಲು ಹರಿಯುವ
ನಾಡು-ಕನ್ನಡ, ಹಾಡಿದೆ;
ತಾಯೆ ಬಾ ಮೊಗತೋರು, ಮಕ್ಕಳ
ಹರಸು, ಎನ್ನುತ ಬೇಡಿದೆ.
ಕಯ್ಯಾರೆರ್ನ ಕಬಿತೆಲು / 68