ಭಾರತಕೆ ದಣ್ಣಾಯಕರನಿತ್ತ ವೀರಸೂ
ಅಮ್ಮೆ ಕಾವೇರಿ ಹರಸಿದ ನಾಡನು;
ಕನ್ನಡದ ಕಾಶ್ಮೀರ ಕೊಡಗು ಭೂರಮೆ ಸೊಬಗು
ಹಿಗ್ಗಿ ಹಾಡಿದೆ ಹುತ್ತರಿಯ ಹಾಡನು;
ನೀ ಕವನ ಗಾರುಡಿಗ, ಬಾಗಿಲಿನ ಬಿಲದೊಳಿಹ
ಹಾವ ತಲೆದೂಗಿಸಿದೆ ಹೂವಿನಂತೆ;
ರವಿ ಮೂಡುವನು, ಚಂದ್ರ ತೇಲುವನು, ನಕ್ಷತ್ರ
ಮಿನುಗುವುವು _ಕವಿ ಮಂತ್ರವಾದಿಯಂತೆ!
ನಿನ್ನ ವಿಕ್ರಮ ಹಲವು, ನಿನಗೆ ಪ್ರಥಮದ ಗೆಲುವು,
ಸಣ್ಣಕತೆಗಳ ಜನಕ, ಶಿಶುಗೀತೆ ತಾತ;
ನೀ ಹರಟೆಮಲ್ಲ ಮಾತಿಗೆ ಮಧುವ ಲೇಪಿಸಿದೆ
ಹಾಸ್ಯಪ್ರಬಂಧದಿ, ನವೋದಯದ ವಿಧಾತ.
ಬಂಧು ನೀ ಬೆನಗಲಗೆ, ಸನ್ಮಿತ್ರ ಮುದ್ದಣಗೆ,
ಸಂಗಾತಿ ಕಾಮತಗೆ, ರಾಷ್ಟ್ರಕವಿಗೆ ಗುರು;
ಕಾವೇರಿಯಿಂದ ಗೋದಾವರಿಯ ವರಮಿರ್ಪ
ಕನ್ನಡದ ಕುಲಕೋಟಿ ಎಲ್ಲ ನಿನ್ನವರು!
***
ಒಬ್ಬನೇ ಪಂಜೆ, ಒಬ್ಬ ಮುದ್ದಣ
ಒಬ್ಬ ರತ್ನಾಕರಣ್ಣ;
ಒಬ್ಬ ಪೈ ಮತ್ತೆ, ಇಬ್ಬರಿಲ್ಲವಂತೆ
ಹೋಲ್ವರಾರು ಇವರನ್ನ?
***
ಬಂಜೆಯಲ್ಲ- ತುಳುತಾಯಿ ಪಡೆದಳು,
ಪಂಜೆಯಂಥ ಪುತ್ರರನು;
ಕಂಡರಲ್ಲ-ಪಾಲ್ಗಡಲಿನೊಡಲೊಳು,
ಹರಿಯ ಹೃದಯರತ್ನವನು
ಕಯ್ಯಾರೆರ ಕಬಿತೆಲು / 65