ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೭೭

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಪರವಪಂಬದರ ನಲಿವ ನಲಿಕೆಯರ
ದುಡಿಯ ಪಾಡ್ದನಗಳಲ್ಲಿ
ಭೂತ ಕೋಲ ನೇಮವು ನಡಾವಳಿ
ನಡೆಯುತಿರುವ ನೆಲದಲ್ಲಿ

ತುಳುವ ಸಂಸ್ಕೃತಿಯ ಸಾರ ಹೀರುತ
ರಾಯ ಮಂಗೇಶ ಬಳೆದ;
ಕಲಿತ ಕನ್ನಡದಿ ಕವಿತೆ ಕಟ್ಟುತ
ಹೆಸರು ಕವಿಶಿಷ್ಯ ತಳೆದ.


ಪಡುವಣದ ಗಾಳಿ ಬೀಸುತ ಬಂತು ತಾಯ್ನೆಲಕೆ,
ವಿಷವುಂಡು ಕೊನೆಗೆ ಸೊದೆಗೆಳಸಿದಂತೆ;

ಅಡಿಮೆಸಂಕಲೆ ಬಿಗಿಯೆ ಜನತೆಗಾಯ್ಕೆಚ್ಚರಿಕೆ,
ಬಿಡುಗಡೆಯ ನೇಸರುದಯವ ಕಾಂಬ ಚಿಂತೆ.

ಎಚ್ಚರೆಚ್ಚರವಾಯ್ತು ಕೇಳಿತ್ತುಷಾಸೂಕ್ತಿ
ಕುಲಕೋಟಿ ಕಲಕಂಠ ಕೂಡಿಹಾಡಿ,
ನಮ್ಮ ತಾಯ್ನಾಡೆಂಬ ನಮ್ಮ ತಾಯ್ನುಡಿಯೆಂಬ
ಅಭಿಮಾನವನು ಮೆರೆದ ಮೋಡಿನೋಡಿ;

ಆ ನವೋದಯದ ಕನ್ನಡಕುಲಕೆ ಮಂತ್ರಿಸಿದ
ಋಷಿಚೇತನವು ಪಂಜೆ ಮಂಗೇಶರಾಯ;
ಏನು ದಿವ್ಯ ಸ್ಪೂರ್ತಿ! ನಿನಗೆ ಸಂದಿದೆ ಕೀರ್ತಿ
ನೀ ನಡೆದ ಹಾದಿಯನು ಹಿಡಿದೆವಯ್ಯ.

ಸೀಮೆ ಕೊಂಕಣದ ತೆಂಕಣಗಾಳಿಯಾಟವನು
ಹಾಡಿ ಕವನದ ಚಿತ್ರ ಮೋಡಿ ಮೆರೆದೆ;
ಎರೆದೆ ತುಳು ಪಾಡ್ದನದ ರಸದ ಸವಿಯೂಟವನು
ಅಮರಕಥೆ ಕೋಟಿಚೆನ್ನಯವ ನಮಗೊರೆದೆ.

ಕಯ್ಯಾರೆರ್ನ ಕಬಿತೆಲು / 64