ಕೋಟೆಕೊತ್ತಳಗಳೊಡೆದು,
ಮಂದಿ ಮಾರ್ಬಲವ ಕಡೆದು,
ಅರಿ ಶಿರ ಚೆಂಡಾಡಿದನು,
ವೀರನಾರು ಹೇಳಿದನು? || 22 ||
ಹಾಡು ಪಾಡ್ಡನವ ಹಾಡು
ಹ ಹಾ! ವೀರಕೃತಿ ಹಾಡು;
ವೀರವನಿತೆಯೆನೆ ಹಾಡು,
ಎದೆಯನರಳಿಸಲಿ ಹಾಡು. || 23 ||
ಸ್ವರ್ಣ ಭೂಮಿಯಲಿ ಹರಳು
ಧನ್ಯ ಜನ್ಮಕಿದೆ ಹುರುಳು,
ಳವಾನ್ವಯದ ತಿರುಳು,
ನಿನ್ನ ಕಾಂತಿಮಯ ಕರುಳು. || 24 ||
ಸತ್ಯಸಂಗರದ ಭಟರು,
ಧೀರ ಶೂರ ತುಳುಜನರು
ನಿನ್ನ ಕರುಳೊಳಿಡಿದಿಹರು,
ವೀರಘೋಷ ಮೊಳಗುವರು || 25 ||
ತುಳುವ ಜವ್ವನಿಗನೊಲಿಯೆ,
ಹೆಮ್ಮೆ ಹುಮ್ಮಸದಿ ನಲಿಯೆ,
ಪ್ರೇಮಪುತ್ಥಳಿಯ ಪಡೆದು,
ಹಿಗ್ಗಿ ಹಿಗ್ಗಿ ಸುಖ ಸವಿದು || 26 ||
ವರ್ಷ ನಿಮಿಷದಂತಿರಲು,
ಅಯ್ಯೋ! ಜೋಡಿ ಬೇರ್ಪಡಲು;
ನೊಂದು ಬೆಂದೊಡಲ ಬೆತೆಯ
ಹಾಡ, ಪಾಡ್ಡನವ ಕತೆಯ! || 27 ||
ಹಾಡು, ಪಾಡ್ದನವ ಹಾಡು,
ಮೈಯ ಮರೆತೆಯದೊ ನೋಡು;
ಕಣ್ಣನೀರನದನೊರಸು,
ಕರುಣ ಕಥೆಯನಿದೊ ನಿಲಿಸು || 28 ||
ಕಯ್ಯಾರೆ ಕಬಿತೆಲು / 55