ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೬೭

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಕವಿವರ ಮುದ್ದಣ ಪೇಳ್ದ
ತಾನ್ನುಡಿ ತಿರುಳರಿತಿದ್ದ
ಮುದ್ದು ಮುದ್ದು ಜಗವಾಳ್ದ
ಮುದ್ದಣ ಸವಿ ಸವಿದೆದ್ದ ! || 15 ||

ಪಚ್ಚೆ ಪೈರುಗಳ ನೋಡು
ಹೊಲ ನೆಲದಲಿ ನೀನಾಡು
ಕಟ್ಟಳೆಯನ್ನು ಕಾಪಾಡು
ತುಳುಪಾಡ್ಡನ ಪದ ಹಾಡು || 16 ||

ನಟ್ಟಿ ನೇಜಿಯೊಳೆ ನಿರತೆ
ರಾಗಲಹರಿಗೇಂ ಕೊರತೆ?
ಮನೋಮಂದಿರದೊಳಂತೆ
ಪುಣ್ಯಪಾಡ್ಡನದ ಚರಿತೆ || 17 ||

ದಾನಧರ್ಮದಲಿ ನಿರತ
ಕಟ್ಟು ಕಟ್ಟಳೆಯೊಳಿರುತ
ಕೀರ್ತಿವೆತ್ತ ತುಳುಜನರ,
ಹಾಡು, ಪಾಡ್ಡನದೊಳದರ || 18 ||

ಶಿಲ್ಪ ಶಾಸ್ತ್ರಿಗಳ ರಚನೆ,
ಕಲಾ ಧರ್ಮಗಳ ಘಟನೆ,
ಸಾವಿರ ಕಂಬದ ಬಸದಿ
ಶಾಸನ - ಶಾಶ್ವತ ಕೀರ್ತಿ || 19 ||

ಕಾಲನು ಕುಣಿತದಿ ಕೆದರೆ
ಹಾ! ಹಾಳಾಯಿತೆ ಬಿದಿರೆ?
ಬಾರ್ಕೂರಿನ ರಸಕಥೆಯ,
ಗತ ವೈಭವದುರುವ್ಯಥೆಯ || 20 ||

ಚೌಟ ಬಂಗರೊಡೆತನದಿ,
ಬಂಟರಾಳ್ದ ಮನೆತನದಿ,
ನಡೆದ ನಡಾವಳಿ ನೇಮ
ಹಾಡು ಪಾಡ್ಡನದಿ ನಮ್ಮ || 21 ||

ಕಯ್ಯಾರೆರ್ನ ಕಬಿತೆಲು / 54