ಸರಸಿಜಮುಖಿಯೆಂದೇಕೆ
ಬಣ್ಣಿಪೆಯೇ ಕವಿ? ಜೋಕೆ,
ಕನಸು ಮನಸಿಗದು ಬಯಕೆ
ಸುಂದರ ಸಂಗ್ರಹ ಸಾಕೆ?|| 8 ||
ಕೆಸರಿನ ಬಸುರಿಂದೆದ್ದು
ಕಂಟಕ ಕಾಯದೊಳಿದ್ದು
ಹೂವದಿರುಳು ಹುದುಗಿರದೆ?
ನಿನಗೆ ನೀನೆ ಸರಿ ಮುಗುದೆ || 9 ||
ಸತ್ಯ ಸುಂದರಕೆ ಬೆರೆತ
ನಿತ್ಯ ನಿರ್ಮಲತೆಯರಿತ
ಪ್ರೇಮ ಪೂರ್ಣಿಮೆಗೆ ಬಲಿದ
ಮೈಯ ಕಟ್ಟು ಬಿಗಿ ಬಿನದ || 10 ||
ಶಾಂತಿ ನೀತಿ ನಯಲೋಕ –
ದಲ್ಲಿ ನೀನೆಯಧಿರಾಣಿ
ಕಾಂತಿಕಲೆಯ ಕಟ್ಟೆರಕ
ಸೊಲ್ಲಿಸುತಿಹೆ ರಸರಾಣಿ || 11 ||
ಕುದುರೆಮುಖದ ತುದಿಯೇರಿ
ಇಳಿದು ಬಯಲ ಬಳಿ ಹಾರಿ
ನೇತ್ರಾವತಿಯಲಿ ಮಿಂದು
ಮಂಗಳೂರಿನಲ್ಲಿ ನಿಂದು - || 12 ||
ಸಾಗರಸಂಭವಶ್ರುತಿಗೆ
ರಾಗವ ಜೋಡಿಸು ಜತೆಗೆ;
ನೆಲ ನಲಿಯಲಿ ತನಿತಾನ !
ಗಾನ ನಿನಗೆ ವರದಾನ || 13 ||
ಮಕ್ಕಳ ಮುದ್ದಿಸುವಂದು
ಜೋ ಜೋ - ಜೋಗುಳವೆಂದು,
ಕನ್ನಡ ಕವಿಗಳಿಗಂದು
ನೀ ಕಲಿಸಿಹುದಹುದೆಂದು –|| 14 ||
ಕಯ್ಯಾರೆರ ಕಬಿತೆಲು / 53