ಈ ಪುಟೊನು ಪ್ರಕಟಿಸದ್ ಆಂಡ್
ತುಳುನಾಡಿತಿ
ಹೊಳೆವುದು ಹೊಳೆ ಬೆಳೆ ತೋಟ
ನಾಡ ನಡತೆಗಿದೆ ನೋಟ,
ಕಣ್ ಬಗೆಗಳ ನಲಿದಾಟ
ನಿಜ ನಿಸರ್ಗದಲ್ಲಿ ಮಾಟ || 1 ||
ನಿತ್ಯ ಶಾಂತಿಮಯ ಶಿಬಿರ
ನೋಡ, ನಾಡು ತುಳುಜನರ;
ಸುಗ್ಗಿ ಸಂತಸವ ಚೆಲ್ಲಿ
ನೆಲವೆ ನಲಿಯುತಿಹುದಿಲ್ಲಿ || 2 ||
ಚೈತನ್ಯದ ಚೆಲು ಚವರಿ
ಸಿರಿ ತುಳುನಾಡಿನ ಕುವರಿ;
ಗೌರವ ಗುಣ ಗಂಭೀರೆ
ಸುರ ಸೌಂದರ್ಯವೆ ಸೂರೆ || 3 ||
ಅರಳಿರುವಲರೆವೆ ನಿನ್ನ
ಪುಷ್ಪತ ಸೌರಭವನ್ನ
ಸುತ್ತಲು ಸುರಿದಿದೆ ಚಿನ್ನ,
ಎತ್ತಲು ಗಮಗಮವನ್ನ || 4 ||
ದಂತ ಪಂಕ್ತಿ ಹಿರಿ ಹಿಗ್ಗೆ -
ದುಂಡುಮಲ್ಲಿಗೆಯ ಮೊಗ್ಗೆ
ಪೂರ್ಣಚಂದ್ರಗಿದೆ ಬುಗ್ಗೆ,
ಹರೆಯವೆತ್ತ ತುಳು ಹುಡಿಗೆ || 5 ||
ಸಿರಿ ತುಳುನಾಡಿನ ಬಾಲೆ,
ಕಣ್ಣಕಾಂತಿಯನೆ ಪೋಲೆ,
ಜಿಂಕೆಮರಿಯು ತಾನತ್ತು
ಬೇಡಿತೆ ನಿನ್ನೊಳು ಸೊತ್ತು? || 6 ||
ಚೆಲುವ ಚೆಂದುಟಿಯು ಚೆಲ್ಲೆ
ರಾಗರಂಜನವ ನಲ್ಲೆ,
ತೊಂಡೆಹಣ್ಣದೆನಲೊಲ್ಲೆ
ಪಲ್ಲವೋಲ್ಲಸಿತ ಬಲ್ಲೆ || 7 ||
ಕಯ್ಯಾರೆರ್ನ ಕಬಿತೆಲು / 52