ಈ ಪುಟೊನು ಪ್ರಕಟಿಸದ್ ಆಂಡ್
ನುಡಿಯುತಿರುವೆಯೇನು, ಪಡುವ
ಕಡಲನೊಳ್ಪ ಬೆಡಗಿನಿಂದ?
ಆಶೆ ಭಾಷೆ ಫಲಿಸಲಿ,
ದೇಶ ಕೋಶ ಬೆಳಗಲಿ || 5 ||
ಮೂಡ ಪಡುವ ತೆಂಕ ಬಡಗ
ನಾಡ ನೋಡುತಿರುವ ಬೆಡಗ,
ಹಾಡಲೆಂದೆ ಮನದ ಬಯಕೆ
ಮಾಡಲೇನು ಮಾತು ಸಾಕೆ?
ಅಂತು ವಿಪುಲ ನೀನಹೆ;
ಇಂತು ವಿಫಲ ನಾನಿಹೆ || 6 ||
ಜಗವ ಮೆಟ್ಟಿ ಘನತೆಯಿಂದ
ಮುಗಿಲ ಮುಟ್ಟಿ ಸೊಗಸಿನಿಂದ
ದಿಗಿಲುಗೊಳಿಸಿ ಮಿಗಿಸಿ ನಿಂದ
ನಗವೆ, ನಿನ್ನ ಬಗೆಯ ಚಂದ
ಚೆಲುವ ರೂಪನಾಂತಿಹೆ:
ಒಲಿದು ಮುಂದೆ ನಿಂತಿಹೆ || 7 ||
ಎನ್ನ ತುಳುವ ನಾಡ ಜಸದ
ಉನ್ನತಿಯನು ತೋರುತೆಸೆದ
ನಿನ್ನ ಶುಭ್ರ ಶಿಖರಕಿಂದು
ಸನ್ನುತಿಯನು ಸಲಿಸಲೆಂದು
ಅವಸರದಲಿ ಹಾಡಿದೆ;
ಕವನ ಕಟ್ಟಿ ನೋಡಿದೆ || 8 ||
ಕಯ್ಯಾರೆರ್ನ ಕಬಿತೆಲು / 51