ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೬೩

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಎಸೆವ ಶುಭ್ರ ಶಿಖರವೆತ್ತಿ ಮಸಗಿ ನಿಂತ ಧೀರ ಮೂರ್ತಿ, ಪೊಸಡಿ ಗುಂಪೆ ಬೆಟ್ಟ ನೋಡು, ಹೊಸತು ಕಥೆ ಹಬ್ಬ ಮಾಡು. ಸ್ಫೂರ್ತಿ ಧಾರೆಯೆರೆದಿದೆ; ಶಕ್ತಿ ನೀಡಿ ನಿಂತಿದೆ ಕಾಡಕೇಡು ನಿನ್ನೊಳುಂಟೆ? ನೋಡೆ ದೃಷ್ಟಿ ಮರಳಲುಂಟೆ? ಬೇಡವೆಮಗೆ ಹಾವು ಹುಲಿಯ ಬೀಡು, ನೀನೆ ಬೆಟ್ಟದೊಡೆಯ, ಅಸಮ ಕೀರ್ತಿತೇಜನೆ, ಹೊಸ ನಗಾಧಿರಾಜನೆ ದೂರವಿರುವ ಬೆಟ್ಟವೆಲ್ಲ ತೋರುತಿಹವು ನುಣ್ಣಗೆಂದು, ಮೇರು ಹಿಮಾಲಯಗಳನ್ನು ಏರಹೋಗಿ ಮಡಿದರಿಂದು, ಅದರೊಳಲ್ಲಿ ಕ್ರಾಂತಿಯು, ಒದವುದಿಲ್ಲಿ ಶಾಂತಿಯು ಪೊಸಡಿ ಗುಂಪೆ | 1 N 112 11 31 ಗುಂಪೆ, ನಿನ್ನ ಶಿಖರವೇರ ತಂಪು ನಯನ ಮನದೊಳೂರ ಪೆಂಪ ತೋರ್ಪ ಕಡಲ ನೋಟ ಕಂಪ ತರುವ ಗಾಳಿಯೋಟ ರಸಿಕಗಿದೆ ರಸಾಯನ, ಹೊಸ ನಿಸರ್ಗಭೋಜನ ಕೊಡಲಿ ಕಡಿತದಿಂದ ಪಡೆದ ಪೊಡವಿಯಿಂದು ಸಾಲದೆಂದು || 4 || ಕಯ್ಯಾರೆ ಕಬಿತೆಲು / 50