ಈ ಪುಟೊನು ಪ್ರಕಟಿಸದ್ ಆಂಡ್
ತೆರೆಗಳ ನೊರೆಗಳ ಮಾಲೆಯನ್ನೆತ್ತಿ
ಒಲಿಯುತ ನಲಿಯುತ ಬಂದಳು ಸುತ್ತಿ,
ಕಲಕಲ ನಾದದಿ ಹಾಡಿ ವಿನೋದದಿ
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 6 ||
ನವರತ್ನ ನಿಧಿಯಲ್ಲವೆ ಕಡಲು?
ಪಡೆಯುವಳೇನನೋ ರಭಸದಿ ಸಾಗಲು,
ಸಾಗರಸಂಗಮಕೆನಿತಿದೆ ಸಂಭ್ರಮ?
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 7 ||
ಒಳಗಡೆಯೇನೋ? ಮೊಸಳೆಯೊ? ಮೀನೊ?
ತಳದಲಿ ಸೆಳೆಯುತ ಸುಳಿಯಿಹುದೇನೊ?
ನಿರ್ಮಲ ನೀರೇ ಮೇಲ್ಗಡೆ ತೋರೆ!
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 8 ||
ಮಳೆಗಾಲದ ನೆರೆಯುಬ್ಬರವೆಲ್ಲ,
ಬಿಸಿಲಿನ ಬೇಗೆಗೆ ಬತ್ತುವುದಲ್ಲ!
ಹಿಗ್ಗಿದವರು ತಗ್ಗಲೆಬೇಕೆಂದೊ?
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 8 ||
ಕಯ್ಯಾರೆರ್ನ ಕಬಿತೆಲು / 49