ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/181

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಸ್ವೀಕರಿಸುತ್ತಾರೆ. ಆನಂತರ ರೊಟ್ಟಿಯ ತುಂಡುಗಳನ್ನು ಸಭಿಕರಿಗೆ ಹಂಚುವ ಕ್ರಮವಿದೆ.

ನಿಶ್ಚಿತಾರ್ಥ ಕ್ರಮ ಹಿಂದೆ ಮನೆಯ ಸದಸ್ಯರು, ಕುಟುಂಬಿಕರು ಮತ್ತು ಚರ್ಚ್‌ನ ಗುರುಗಳು ಸೇರಿ ಮಾಡುವ ಸಂಪ್ರದಾಯವಾಗಿತ್ತು. ಆದರೆ ಈಗ 300- 500 ಜನರನ್ನು ಕರೆದು ಔತಣದ ವ್ಯವಸ್ಥೆ ಮಾಡುವ ಕ್ರಮ ಬಂದಿದೆ. ಹಿಂದೆ ಕೆಥೋಲಿಕರಲ್ಲಿ ನಿಶ್ಚಿತಾರ್ಥವು ದೇವಾಲಯದಲ್ಲಿ ನಡೆಯುತ್ತಿತ್ತು. ಪ್ರೊಟೆಸ್ಟಂಟ್ ಕ್ರೈಸ್ತರದ್ದು ಹಿಂದಿನಿಂದಲೂ ಮನೆಯಲ್ಲಿಯೇ ನಡೆಯುತಿತ್ತು ಈಗ ಹಾಲ್‌ಗಳಲ್ಲಿ ನಡೆಯುತ್ತದೆ.

ಮದುವೆ ಮುಂಚಿನ ದಿನ ಮದುಮಗ ಮತ್ತು ಮದುಮಗಳ ಮನೆಯಲ್ಲಿ ಕುಟುಂಬದ ಸದಸ್ಯರು, ನೆರೆಹೊರೆಯವರು, ಧರ್ಮಗುರುಗಳು ಮತ್ತು ಸಭೆಯ ಮುಖ್ಯಸ್ಥರು ಸೇರಿ ಪ್ರಾರ್ಥನಾ ಕೂಟ ನಡೆಸಿ ಮದುಮಕ್ಕಳಿಗೆ ತೆಂಗಿನೆಣ್ಣೆ, ಹಸಿ ಅರಸಿನ ಮಿಶ್ರಿತ ತೆಂಗಿನ ಹಾಲು ಹಚ್ಚುವ ಕ್ರಮವಿತ್ತು. ಕೊನೆಯಲ್ಲಿ ಬಂದವರಿಗೆಲ್ಲ ಊಟದ ವ್ಯವಸ್ಥೆಯಿತ್ತು. ಈ ಊಟದಲ್ಲಿ ಪಾಯಸ, ಕುಂಬಳಕಾಯಿ ಸೂ, ಕಡ್ಲೆ ಅರಿಸಿದ್ದು, ಉಪ್ಪಿನಕಾಯಿ ಹೊರತು, ಮೀನು ಮಾಂಸದ ತಯಾರಿ ಇಲ್ಲ. ಈ ಕ್ರಮ ಯಾಕಂದರೆ ಕುಟುಂಬವಾಗಿ ಸೇರಿ ಮದುಮಕ್ಕಳನ್ನು ಹರಸುವುದು ಮತ್ತು ಮರುದಿನ ನಡೆಯುವ ಮದುವೆ ಅಡುಗೆ, ದಿಬ್ಬಣ, ಮುಂತಾದ ತಯಾರಿಗೆ ಮೊದಲಿನ ದಿನ ಮನೆಯಲ್ಲಿ ಒಟ್ಟು ಸೇರುವುದು ಈ ಕಾರ್ಯಕ್ರಮಗಳೆಲ್ಲವೂ ದೇಶೀಯವಾಗಿಯೇ ನಡೆಯುತ್ತದೆ. ಮದುಮಕ್ಕಳಿಗೆ ಅರಸಿನ ಹಾಲು ಹಚ್ಚುವುದು, ಕುಶಾಲಿನ ಪದ್ಯಗಳನ್ನು ಹೇಳುವುದು ಇತ್ಯಾದಿ. (ಮೊದಲು ಒಳ್ಳೆ ಬುದ್ದಿಯ ಮಾತುಗಳನ್ನು ಹೇಳುವ ಕ್ರಮವಿತ್ತು) ಹಿಂದೂ ಧರ್ಮೀಯರಲ್ಲಿ ಆಮಂತ್ರಿತರೆಲ್ಲರೂ ಮದ್ರೆಂಗಿ ಹಚ್ಚುವ ಹಾಗೆ ಇವರಲ್ಲಿ ಅರಸಿನ ಹಾಲು ಹಚ್ಚುವ ಕ್ರಮವಿದೆ. ಆದರೆ ಈಗ 200-300 ಜನ ಸೇರಿಸಿ ಔತಣ ಕೂಟ ನಡೆಸುವ ಕಾರ್ಯಕ್ರಮವಾಗಿದೆ. ಔತಣಕ್ಕೆ ಮಾಂಸಾಹಾರಿ ಊಟವೇ ಆಗಬೇಕು, ಮಧುಪಾನದ ವ್ಯವಸ್ಥೆ ಇಲ್ಲವಾದರೆ ಮಂದ್ರಂಗಿ ಊಟವೇ ಆಗುವುದಿಲ್ಲ ಎಂಬ ಕ್ರಮಗಳು ಹೆಚ್ಚಿನ ಕಡೆ ಬರುತ್ತಿದೆ. ಇತ್ತೀಚೆಗೆ ಮದುವೆ ಮುಂಚಿನ ದಿನ ಮಾತ್ರವಿದ್ದ ಮಧ್ಯಪಾನ ಬಳಕೆಯ ಕ್ರಮ ಈಗ ಮೊದಲ ಪರಮ ಪ್ರಸಾದದ ದಿನ, ನಿಶ್ಚಿತಾರ್ಥ, ಬಯಕೆ, ನಾಮಕರಣದಲ್ಲೂ ಅಲ್ಲಲ್ಲಿ ಕಂಡುಬರುವುದು ಬೇಸರದ ಸಂಗತಿಯಾಗಿದೆ.

ಮದುಮಗ ಕಚ್ಚೆ, ಬಿಳಿ ಉದ್ದ ತೋಳಿನ ಶರ್ಟ್ ಬಳಸುತಿದ್ದರೆ ಈಗ ಸೂಟ್ ಬೂಟ್ ದರಿಸುವ ಕ್ರಮವಿದೆ. ಮದುಮಗಳು ಜರಿ ಸೀರೆ ಉಡುವ ಕ್ರಮವಿತ್ತು ಈಗ ಆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

169