ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/180

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಮುಂತಾದ ಎಲ್ಲಾ ವಿಧಾನಗಳು ಇವುಗಳಲ್ಲಿವೆ. ಆದರೆ ಈಗ ಪ್ರಾರ್ಥನಾ ವಿಧಿವಿಧಾನಗಳು ಕನ್ನಡದಲ್ಲಿ ನಡೆಯುತ್ತವೆ.

ಮದುವೆ ಕ್ರಮದಲ್ಲಿ ಈ ಹಿಂದೆ ಉಂಗುರ, ತಾಳಿ ಬಳಸುವ ಕ್ರಮವಿಲ್ಲ 1945 ನಂತರ ತಾಳಿ ಕಟ್ಟುವ ಕ್ರಮ ಬಂದಿದೆ. 1968 ನಂತರ ಉಂಗುರ ಧರಿಸುವಾಗ ಮದುಮಗ ಮಗಳು ಹೇಳುವ ಕ್ರಮ ಬದಲಾಗಿದೆ. ವಿಧವೆಯರು ಕರಿಮಣಿ ಧರಿಸುತ್ತಿರಲಿಲ್ಲ. ಈಗ ದರಿಸುತ್ತಾರೆ. ಕನ್ಯೆಯರು ಸೀರೆ ಉಡಬೇಕು ಸೀರೆಯ ಸೆರಗನ್ನು ತಲೆಗೆ ಮುಚ್ಚಿಕೊಳ್ಳಬೇಕು ಇಲ್ಲವಾದರೆ ತಲೆಗೆ ಶಾಲುಗಳನ್ನಾದರೂ ಹೊದಿಸಬೇಕು ಎಂಬ ನಿಯಮವಿತ್ತು. ಆದರೆ ಈಗ ಹಿರಿಯರು ಬಳಸುತ್ತಾರೆ. ಯವನಸ್ಥರಲ್ಲಿ ಈ ಕ್ರಮ ಸ್ವಲ್ಪ ಕಮ್ಮಿಯಾಗಿದೆ.

ಕ್ರೈಸ್ತರಲ್ಲಿ ಬೇರೆ ಧರ್ಮವನ್ನು ಆದರಿಸುವುದು, ಕಣಿ ಕೇಳುವುದು, ಹರಕೆ ಹೇಳುವುದು, ವ್ಯಭಿಚಾರ, ಕಳ್ಳತನ ಮುಂತಾದವುಗಳಿಗೆ ಸಭಾ ಶಿಕ್ಷೆಯಿರುತ್ತಿತ್ತು. ಅಡ್ಡ ಬೆಂಚುಗಳಲ್ಲಿ ಕುಳಿತುಕೊಳ್ಳಬೇಕು/ ಪರಮ ಪ್ರಸಾದ ಸ್ವೀಕಾರವಿಲ್ಲ/ ಸತ್ತರೆ ಧರ್ಮಗುರು ಹೂಳುವಂತಿಲ್ಲ/ ಘಂಟೆ ಬಾರಿಸುವಂತಿಲ್ಲ/ಶಿಕ್ಷೆಗೊಳಗಾದವನ ಮನೆಗೆ ಯಾರೂ ಔತಣಕ್ಕೆ ಹೋಗುವಂತಿಲ್ಲ. ಜಿಲ್ಲೆಯಲ್ಲಿ ಪುರುಷರು ಮಾತ್ರ ಧರ್ಮಗುರುಗಳು/ ಸಭಾ ಹಿರಿಯರು ಆಗಬೇಕೆಂಬ ಕ್ರಮವಿತ್ತು 1947 ಸಭೆಗಳು ಭಾರತೀಕರಣವಾದ ಮೇಲೆ ಈ ಕ್ರಮವಿಲ್ಲ. ಸ್ತ್ರೀಪುರುಷರು ಯಾರೂ ಧರ್ಮಗುರು ಆಗಬಹುದು. ತುಳುನಾಡಿನಲ್ಲಿ ಈ ಕ್ರಮ ಬಂದುದು 1968ರ ನಂತರ, ಆದರೆ ಕೆಥೊಲಿಕ ಕ್ರೈಸ್ತರಲ್ಲಿ ಪುರುಷರು ಮಾತ್ರ ಧರ್ಮಗುರುಗಳಾಗುವ ಕ್ರಮವಿದೆ.

ಆರಾಧನೆಗಳಲ್ಲಿ ಹಬ್ಬದ ಆಚರಣೆಗಳಲ್ಲಿ ಈಗ ಹೆಚ್ಚಿನವು ದೇಶೀಯ ಆಚರಣೆಗಳೇ ಬಳಕೆಯಾಗುತ್ತವೆ. ಸುಗ್ಗಿ ಹಬ್ಬದಲ್ಲಿ ಕದಿರು ಕಟ್ಟುವಂತದ್ದು. ಮರಿಯಮ್ಮನ ಮೂರ್ತಿಗೆ ಹೂಗಳನ್ನು ಅರ್ಪಿಸುವಂತದ್ದು, ದೇಶೀಯ ತಿಂಡಿಗಳನ್ನು ಮಾಡುವಂತದ್ದು, ಉಡುಗೆ ತೊಡುಗೆಗಳಲ್ಲಿ ಗಂಡಸರು ಕಚ್ಚೆ, ಉದ್ದ ತೋಳಿನ ಅಂಗಿಗಳನ್ನು ಹಾಕಿ ಮುಂಡಾಸು ತೊಡುವುದು ಹೆಂಗಸರು ಉದ್ದ ತೋಳಿನ ರವಿಕೆ ಹಾಗೂ ಉದ್ದ ಲಂಗ ತೊಡುವುದು, ದೇವಾಲಯಕ್ಕೆ ಹೋಗುವಾಗ ಸ್ಕಾರ್ಫ಼್ಫ್ ಧರಿಸುವ ಕ್ರಮ ಬಳಕೆಯಲ್ಲಿತ್ತು. ಆದರೆ ಅವೆಲ್ಲ ವಿದೇಶಿ ಶೈಲಿಗೆ ಬದಲಾಗಿದೆ. ಇತ್ತೀಚೆಗೆ ಕೆಲವು ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ಗಳು ಬಳಕೆಗೆ ಬಂದಿವೆ. ಪರಮ ಪ್ರಸಾದ ಪ್ರೊಟೆಸ್ಟಂಟರಲ್ಲಿ ಒಂದೇ ಪಾತ್ರೆಯಲ್ಲಿ ದ್ರಾಕ್ಷಾರಸವನ್ನು ಹಂಚುವ ಕ್ರಮವಿತ್ತು. ಈಗ ಸಿಂಗಲ್ ಕಪ್ ಬಳಕೆಯಾಗುತ್ತಿದೆ. ಕೆಥೋಲಿಕರಲ್ಲಿ ಧರ್ಮಗುರುಗಳು ಮಾತ್ರಾ ದ್ರಾಕ್ಷಾರಸ ಮತ್ತು ರೊಟ್ಟಿಯನ್ನು ಸಾಂಕೇತಿಕವಾಗಿ

168

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...