ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/152

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

{{{1}}}

ಬಾಸೆಲ್ ಮಿಶನ್ ಮತ್ತು ಬುಡಕಟ್ಟು ಜನಾಂಗ

ಭಾರತದಲ್ಲೆಡೆ ಇದ್ದಂತೆ ನಮ್ಮ ಜಿಲ್ಲೆಯಲ್ಲಿಯೂ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಪ್ರಚಲಿತದಲ್ಲಿತ್ತು. ಊಳಿಗಮಾನ್ಯ ವ್ಯವಸ್ಥೆ ಹಾಗು ಜಾತಿ ಪದ್ಧತಿಯೊಳಗಿನ ಅಸ್ಪೃಶ್ಯತೆಯಿಂದ ಎಲ್ಲರಿಗಿಂತ ಕೊನೆಯಲ್ಲಿ ಬರುವ ಪಂಚಮರು, ಹೊಲೆಯರು ಮತ್ತು ಇತರರರು ಮೇಲ್ಪಾತಿಯವರಿಂದ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶೋಷಿತರಾಗಿದ್ದರು. ಸಮಾನತೆ ತರಬಲ್ಲ ಸಾಧನವಾದ ಶಿಕ್ಷಣದಿಂದ ಅಸ್ಪೃಶ್ಯರು ವಂಚಿತರಾಗಿದ್ದರು. ಭಾರತದ ಕೆಲವೆಡೆ ಬ್ರಿಟಿಷರು ಶಾಲೆಗಳನ್ನು ತೆರೆದಿದ್ದರೂ ಈ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಿರಲಿಲ್ಲ. ಇಲ್ಲಿನ ಜನರು ವರ್ಣ ವ್ಯವಸ್ಥೆಯಲ್ಲಿರುವ ತಮ್ಮ ಕುಲ ಕಸಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಕ್ಷರ ಜ್ಞಾನ ತರುವಂತಹ ಶಿಕ್ಷಣ ಕೇವಲ ಬ್ರಾಹ್ಮಣರ ಸೊತ್ತಾಗಿತ್ತು. ಇನ್ನುಳಿದ ಜಾತಿಗಳ ಕುಲಕಸಬುಗಳಿಗೆ ಅಕ್ಷರಜ್ಞಾನದ ಅವಶ್ಯಕತೆ ಇರಲಿಲ್ಲ. ಜಿಲ್ಲೆಯ ಮೂಲ ನಿವಾಸಿಗಳೆಂದು ಪರಿಗಣಿಸಲ್ಪಡುವ ಪಂಗಡಗಳಾದ ಕೊರಗ, ಜೇನು ಕುರುಬ, ಮಲೆಕುಡಿಯ, ಹೊಲೆಯ ಮುಂತಾದವರು ಕೃಷಿ ಪೂರ್ವ ಹಾಗೂ ತಾಂತ್ರಿಕತೆಯ ಪ್ರೌಡಿಮೆಯಿಲ್ಲದ ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುತಿದ್ದರು. ಸ್ವಂತ ಭೂಮಿಯಿಲ್ಲದೆ ತಮ್ಮ ದೈನಂದಿನ ವೆಚ್ಚಗಳಿಗಾಗಿ ಮೇಲ್ದಾತಿಯವರನ್ನೇ ಅವಲಂಭಿಸಬೇಕಾಗಿತ್ತು. ಆದ್ದರಿಂದ ಈ ವರ್ಗದ ಜನರು ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದರು. ಈ ಪಂಗಡಗಳಿಗೆ ಸೇರಿದವರು ಉತ್ತಮ ಬದುಕಿಗೆ ಬೇಕಾಗಿರುವ ಸಾಧನಗಳಿಂದ ಇಂದಿಗೂ ವಂಚಿತರಾಗಿದ್ದಾರೆ.

ಶ್ರೀ ನಾರಾಯಣ ಗುರುಗಳ “ಒಂದೇ ಜಾತಿ ಒಂದೇ ದೇವರು” ಎಂಬ ತತ್ವ ಜಿಲ್ಲೆಯ ಬ್ರಾಹ್ಮಣೇತರ ಜಾತಿ, ಅದರಲ್ಲೂ ಹೆಚ್ಚಾಗಿ ಬಿಲ್ಲವರನ್ನು ಪ್ರೇರೇಪಿಸಿದರೂ ಅವರಿಗಿಂತ ಹೀನಾಯವಾಗಿ ಬದುಕುತ್ತಿದ್ದ ಪಂಗಡಗಳನ್ನು ಯಾವುದೇ ರೀತಿಯಲ್ಲಿ ತಟ್ಟಲಿಲ್ಲವೆನ್ನುವುದು ವಿಪರ್ಯಾಸ ಸಂಗತಿ.

1834ರಿಂದ ಬಂದ ಬಾಸೆಲ್ ಮಿಶನರಿಗಳು ಇಲ್ಲಿ ಕ್ರೈಸ್ತ ಮತ ಪ್ರಚಾರದಲ್ಲಿ ತೊಡಗಿದರು. ಅವರು ಇಲ್ಲಿ ಕಂಡ ಮೊದಲ ತೊಡಕೆಂದರೆ ಜಿಲ್ಲೆಯಲ್ಲಿ ಶೈಕ್ಷಣಿಕ

140

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...