ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/115

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಮಂಗಳೂರಿನಲ್ಲಿ ಬ್ರಿಟೀಷರು ನಿರ್ಮಿಸಿದ ಸಂತಪೌಲನ ದೇವಾಲಯ

ಭಾರತಕ್ಕೆ 1834ರಲ್ಲಿ ಬಂದ ಬಾಸೆಲ್ ಮಿಶನರಿಗಳು ಮಂಗಳೂರಿನಲ್ಲಿ ಕ್ರೈಸ್ತ ದೇವಾಲಯಗಳನ್ನು ಸ್ಥಾಪಿಸುವುದಕ್ಕಿಂತ ಮುಂಚೆ ಬ್ರಿಟೀಷ್ ಸರಕಾರವು ತಮ್ಮ ಅಧಿಕಾರಿಗಳು ಮತ್ತು ಸೈನಿಕರ ಆರಾಧನೆಗಾಗಿ ಮಂಗಳೂರಿನಲ್ಲಿ ಆರಂಭಿಸಿದ ಆರಾಧನಾ ಕೇಂದ್ರಕ್ಕೆ ನೂತನವಾಗಿ ನಿರ್ಮಿಸಲ್ಪಟ್ಟ ಮಂಗಳೂರಿನಲ್ಲಿನ ಸ್ಟೇಟ್‌ ಬ್ಯಾಂಕ್ ವೃತ್ತದ ಪರಿಸರದಲ್ಲಿರುವ ಸಂತ ಪೌಲನ ದೇವಾಲಯ 1843ರಲ್ಲಿ ಪ್ರತಿಷ್ಠೆಗೊಂಡಿದೆ.

ಬ್ರಿಟಿಷರ ಆಡಳಿತ ಅವಧಿಯಾದ 1799-1862ಕ್ಕಿಂತಲೂ ಹಿಂದೆ ಟಿಪ್ಪು ಸುಲ್ತಾನರ ಆಡಳಿತ ಅವಧಿಯಲ್ಲಿ ಇಂಗ್ಲಿಷರ ಸೈನ್ಯದ ತುಕಡಿಗಳಿದ್ದು ಮಂಗಳೂರಿನಲ್ಲಿ ಬ್ರಿಟಿಷ್ ಸಂಪರ್ಕವಿದ್ದು ಆಗಲೇ ಬ್ರಿಟೀಷರ ಆರಾಧನಾ ಸ್ಥಳವಿದ್ದಿರಬೇಕು. ಯಾಕಂದರೆ ಈ ದೇವಾಲಯದ ಅಧೀನದಲಿರುವ ಸ್ಮಶಾನ ಭೂಮಿ ಆವರಣದಲ್ಲಿರುವ ನಿಧನ ಹೊಂದಿದ ಬ್ರಿಟಿಷರ ಸ್ಮಾರಕಗಳು ಇಲ್ಲಿವೆ. 1800 ನವೆಂಬರ್ 26ರಲ್ಲಿ ಮಂಗಳೂರಿನಲ್ಲಿ ನಿಧನರಾದ ಬ್ರಿಗೆಡಿಯರ್ ಜನರಲ್ ಜಾನ್ ಕಾರ್ನಿಕ್ ಮತ್ತು ಹಲವು ಬ್ರಿಟಿಷ್ ಅಧಿಕಾರಿಗಳ ಸ್ಮಾರಕಗಳು ಅಲ್ಲಿವೆ.

1837ರಲ್ಲಿ ನಡೆದ ಕೊಡಗು ದಂಗೆಯ ಬಳಿಕ ಜಿಲ್ಲೆಯಲ್ಲಿ ಈಸ್ಟ್ ಇಂಡಿಯ ಕಂಪೆನಿ ತನ್ನ ಸೈನ್ಯ ಬಲವನ್ನು ಹೆಚ್ಚಿಸಿದಾಗ ಬ್ರಿಟಿಷ್ ಸೈನಿಕರ ಆಧ್ಯಾತ್ಮಿಕ ನೈತಿಕ ಅಗತ್ಯತೆಗಳಿಗೆ ವಿಶಾಲವಾದ ಚರ್ಚ್‌ನ ಅಗತ್ಯತೆ ಕಂಡುಬಂದು 1840ರಲ್ಲಿ ಇಲ್ಲಿಯೇ ವಾಸಿಸುವ ಧರ್ಮಗುರುವನ್ನು ನೇಮಿಸಲಾಗಿತ್ತು. ಆಗ ಇಲ್ಲಿ ಧರ್ಮಗುರುವಾಗಿದ್ದ ರೆವೆ. ಆರ್. ಡಬ್ಲ್ಯೂ, ವೈಟ್‌ಫೋರ್ಡ್ ನಾಯಕತ್ವದಲ್ಲಿ ಪ್ರಯತ್ನಗಳು ನಡೆದು 1841ರಿಂದ ಇಲ್ಲಿ ಚರ್ಚ್ ಕಟ್ಟುವ ಪ್ರಕ್ರಿಯೆ ಪ್ರಾರಂಭವಾಗಿ 1843ರಲ್ಲಿ ಪ್ರತಿಷ್ಟೆಗೊಂಡಿತು. ಮಿಲಿಟರಿ ಬೋರ್ಡ್‌ನ ನಾಯಕತ್ವದಲ್ಲಿ 120 ಮಂದಿ ಕುಳಿತುಕೊಳ್ಳುವ ಸಣ್ಣ ಪ್ರಾರ್ಥನಾಲಯವಾಗಿದ್ದು ಮದ್ರಾಸ್‌ನಿಂದ ಬಂದ ಚರ್ಚ್ ಆಫ್ ಇಂಗ್ಲೆಂಡ್‌ನ ಬಿಷಪ್ ಸ್ಪೆನ್ಸರ್‌ರಿಂದ ಉದ್ಘಾಟನೆಗೊಂಡಿತು. ಅದೇ ದಿನ ನವೀಕೃತಗೊಂಡ ಸ್ಮಶಾನ ಭೂಮಿಯನ್ನು ಉದ್ಘಾಟನೆ ಮಾಡಲಾಗಿತ್ತು. 1852ರಲ್ಲಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

103