ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೭೫

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಕವಿಯ ಕಲ್ಪನೆಯೊಂದು ಸಾಮ್ರಾಜ್ಯ ಸೃಷ್ಟಿಯಲಿ
ನಿನ್ನ ರಮಣಿಯೆ ರಾಣಿ - ನೀನೆ ಸಾಮ್ರಾಟ!

ಜನರ ಸೊತ್ತನು ಸುಲಿದು ದ್ರವ್ಯರಾಶಿಯ ಪಡೆದು
ದುಡಿಸಿ ಸಾಯಿಸಿ ಕಟ್ಟಿಸಿದ ತಾಜಮಹಲು-
ಪ್ರೇಯಸಿಯ ನೆನಹಿಂಗೆ-ಶಾಜಹಾನ್‌ದೊರೆ, ದೊರೆಯೆ
ಈ ಮನೋರಮೆಯ ಮೂರ್ತಿಗೆ? ಬೆಲೆಯ ಹೇಳು?

ಮರಮರವ ಕಂಡು ಕೂಗಿದ ಕಿರಾತನೆ ಹಿಂದೆ
ರಾಮಾಯಣವ ಹಾಡಿ ಕವಿಯಾದನು;
ದಿನದಿನವು ದೇವರಿಗೆ ಮಾಲೆಯರ್ಪಿಸಿ ಬಂದೆ
ರಾಮಕಥೆ ಬರೆದೆ-ಮುಕ್ತನೆ ಎಂಬೆನು.




ಕಯ್ಯಾರೆರ್ನ ಕಬಿತೆಲು / 62