ಈ ಪುಟೊನು ಪ್ರಕಟಿಸದ್ ಆಂಡ್
ಓಟ ಕಂಬಳದಿ ಬೇಟೆ ಹಂಬಲದಿ
ಆಟ ದೊಂದಿಯಾರ್ಭಟವು
ಅಲ್ಲಿ-ದೇಗುಲದಿ ಗಂಟೆ ಮೊಳಗಿತು
ಅವನೋ ಮಾಲೆಗಾರ;
ನಿಲ್ಲು-ದೇವರಾರತಿಯು ಬೆಳಗಿತು
ಬಾಗಿ ಬಕುತಿ ತೋರ
ಹಗಲು ರಾತ್ರಿಯಿದೆ ಜಾತ್ರೆಯಾಗಿದೆ
ತುಳುವ ನಾಡಿನಲ್ಲಿ;
ರಸದ ರಥದ ಯಾತ್ರೆಯಲಿ ಸಾಗಿದೆ
ಜನತೆ ಜತೆಯೊಳಿಲ್ಲಿ.
ನವನವೋನ್ವೇಷ ತುಂಬಿದಾವೇಶ
ನಿಜ ನಿಸರ್ಗದಾಟ;
ವೀರ ಶೃಂಗಾರ ಹಾಸ್ಯ ಕಾರುಣ್ಯ
ರಸದ ರುಚಿಯ ಊಟ.
ಬಾಳ ಬವಣೆಯನು ಮರೆತೆ ಹಾಡಿದನು
ಮುದ್ದು ಮುದ್ದು ಮನಕೆ;
ಉಪ್ಪುನೀರನೇ ಹೀರಿ ಬೆಳೆದ ಸಸಿ
ಕಲ್ಪವೃಕ್ಷ ಜನಕೆ
3
ಬಡವು ಬೆಂಕಿಯಲ್ಲಿ ಒಡಲು ಬೆಂದಾಗ
ನೋವೆ ಕಾವ್ಯವೆಂದೆ;
ಮಡದಿ ಮೆಚ್ಚುಗೆಯ ಕೊಡಲು ಬಂದಾಗ
ಜೀವ ದಿವ್ಯವಂದೆ
ದೇಹ ಶ್ರೀಗಂಧ ಕೊರಡು ಸವೆಯಿತೋ
ಕ್ಷೀಣ ಕ್ಷೀಣವಾಗಿ;
ಭಾವ ಪರಿಮಳದ ಕಾವ್ಯವರಳಿತೋ
ನೂರು ದಳವೆ ಆಗಿ
ಕಯ್ಯಾರೆರ್ನ ಕಬಿತೆಲು / 60