ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೭೨

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ನೂರು ನೂರು ಕಣ್ಣೀರು

ನೂರುನೂರು ಕಣ್ಣೀರು ಹರಿಸಿದೆನು
ಮತ್ತೆ ಮೈಯ ಮರೆತೆ;
ನೋವೆ? ನಲಿವೆ? ನೆನೆದು ಸುರಿಸಿದೆನು,
ಬೊಗಸೆ ತುಂಬಿದೊರತೆ!

ಕಿರಿಯನೊಂದು ಕಾಣಿಕೆಯು ಹಿರಿಯನಿಗೆ
ಬಾಷ್ಪಪುಷ್ಪವಿಡುವೆ;
ಎನ್ನ ತಾಯ ಹಿರಿಗುವರ ಮುದ್ದಣಗೆ
ಎರಗಿ ಕರವ ಮುಗಿವೆ.

2

ತುಳುವಬ್ಬೆಯು ಜೋಜೋ ಎನೆ ಹಾಡಿರೆ
ಸಾಗರಸಂಭವ ಶ್ರುತಿಗೆ,
ಕುದುರೆಮುಖವು ಶಿರವೆತ್ತುತ ನೋಡಿರೆ
ನದಿಕನ್ನಿಕೆ ಪದಹತಿಗೆ

ತೆಂಗಿನ ಕಂಗಿನ ತಲೆ ತೂಗಾಡಿತು
ಓಬೇಲೆಯ ಪಾಡ್ದನಕ್ಕೆ;
ದುಡಿತದ ಬೇನೆಗೆ ದುಡಿ ಮದ್ದಾಯಿತು
ಬಡಿಯುವ ಚೋಮನ ಮನಕೆ

ಆಟಿ ಕಳೆಂಜನ ಸೋಣದ ಜೋಗಿಯ
ಅಂಗಣ ರಿಂಗಣ ನಲಿಕೆ.
ಮೇಳದಿ ತಾಳದಿ ಭೂತದ ಕೋಲದಿ
ಕುಣಿಯಿತು ನೆಲ ನಂದಳಿಕೆ

ಬೀಸುಗಾಳಿಯಲಿ ಸೂಸುಮಳೆಯಲಿ
ಸಿಡಿಲು ಮಿಂಚಿನಬ್ಬರವು;

ಕಯ್ಯಾರೆರ್ನ ಕಬಿತೆಲು / 59