ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/97

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಉಡುಪಿ, ಪರಂಗಿಪೇಟೆ, ಉಳ್ಳಾಲ, ಮಂಜೇಶ್ವರ, ಬಾರಕೂರು, ಕೃಷಿ, ಶಾಸನಗಳು, ಮಳೆ, ರೈಲ್ವೆ ಇಲಾಖೆ, ವ್ಯಾಪಾರ, ಬಂದರು, ಸ್ಥಳನಾಮಗಳ ವಿಶೇಷತೆಗಳು, ಪರಶುರಾಮ ಸೃಷ್ಟಿ, ತುಳುನಾಡನ್ನು ಆಳಿದ ಅರಸರುಗಳೂ, ವಿದೇಶಿಯರು, ಹಿಂದು, ಕ್ರೈಸ್ತ, ಮುಸಲ್ಮಾನ, ಧರ್ಮಗಳ ವಿಚಾರಗಳು ಪ್ರಾಚೀನ ಕಾಲದ ನಾವಿಕರ ಬಗ್ಗೆ ಕಥೆಗಳು, ಟಿಪ್ಪುವಿನ ಬಗ್ಗೆ ಇರುವ ಕಟ್ಟು ಕಥೆಗಳು, ಇಂತಹ ನೂರಾರು ಮಾಹಿತಿಗಳಲ್ಲದೆ ತುಳು ಜಿಲ್ಲೆಯ ಚರಿತ್ರೆ ಸಿಗುವ ಹಲವಾರು ವಿದೇಶಿ ಬರವಣಿಗೆಗಳ ವಿಚಾರಗಳನ್ನೂ ಕಲೆಹಾಕಿದ ಪತ್ರಿಕೆಯಿದಾಗಿದೆ.

ಮ್ಯಾಂಗಲೋರ್ ಮ್ಯಾಗಜಿನ್‌ನಲ್ಲಿರುವ ಲೇಖನಗಳು ಅಧ್ಯಯನಾತ್ಮಕವಾಗಿ ಬರೆದ ಲೇಖನಗಳಿಗಿಂತ ಅವು ಓದುವಿಕೆ, ಅನುಭವ ಮತ್ತು ಅವಲೋಕನಗಳಿಂದ ಕೂಡಿವೆ. ಆಧುನಿಕ ಕಾಲದ ವೈಜ್ಞಾನಿಕ ಮಾದರಿಯಲ್ಲಿ ಈ ಲೇಖನಗಳು ಸಿದ್ಧವಾಗಿರದಿದ್ದರೂ ಅವು ತಮ್ಮ ಉತ್ಕೃಷ್ಟತೆಗೆ ಹೆಸರುವಾಸಿಯಾಗಿವೆ.

BASEL MISSION REPORT 1841-1914:ಇಂಗ್ಲೀಷ್ನಲ್ಲಿ ಬರೆದಿರುವ ಈ 73 ವರ್ಷಗಳ ವರದಿಗಳಲ್ಲಿ ಬಾಸೆಲ್ ಮಿಶನ್ ಸಂಸ್ಥೆಯು 1841ರಿಂದ 1914 ತನಕ ತುಳುನಾಡಿನಲ್ಲಿ ಮಾಡಿದ ಸಮಗ್ರ ಪರಿಚಯ ಸಿಗುತ್ತದೆ. ತುಳು ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಶಾಲೆಗಳು, ತುಳು ಜಿಲ್ಲೆಯಲ್ಲಿ 1841ರಿಂದ ಮುದ್ರಣಗೊಂಡ ಪುಸ್ತಕಗಳ ಪಟ್ಟಿ, ತುಳು ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಕೈಗಾರಿಕೆಗೆ, ಹಂಚಿನ ಕಾರ್ಖಾನೆ, ನೇಯಿಗೆ ಕಾರ್ಖಾನೆ, ಮಹಿಳೆಯರಿಗೆ ಶಿಕ್ಷಣ ದೊರಕಿದ್ದು, ಉದ್ಯೋಗ ಸೇರಲು ಪ್ರಾರಂಭ ಮಾಡಿದ್ದು, ಜಿಲ್ಲೆಯ ಶಿಕ್ಷಣ ವ್ಯವಸ್ಥೆ, ಭೂತಾರಾಧನೆ, ಜಿಲ್ಲೆಯ ಜನರು ಕ್ರೈಸ್ತ ಮತ ಸೇರಲು ಕಾರಣಗಳು ಹೀಗೆ ಹಲವಾರು ವಿಚಾರಗಳು ಸಿಗುತ್ತವೆ. ಭಾರತದ ಪ್ರದೇಶಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾರವಾರ, ಕೊಡಗು, ಹುಬ್ಬಳ್ಳಿ ಧಾರವಾಡ, ನೀಲಗಿರಿ, ಕೇರಳ ಮುಂತಾದ ಪ್ರದೇಶಗಳಲ್ಲಿ ಬಾಸೆಲ್ ಮಿಶನ್ ಕಾರ್ಯಕ್ಷೇತ್ರದ ಸಮಗ್ರ ವಿವರವಿರುವ ವರದಿ ಇದಾಗಿದೆ.

ಪರಾಮರ್ಶನ ಸೂಚಿ

ಅಶೋಕ ರಾಖೇಶ್‌ ಡಿ'ಸೋಜ, ಮ್ಯಾಂಗಲೋರ್ ಮ್ಯಾಗಜೀನ್‌ನಲ್ಲಿ ಬಿಂಬಿತ ದಕ್ಷಿಣಕನ್ನಡ, ಎಂ.ಫಿಲ್, ಸಂಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2008, ಕನ್ನಡ ಪತ್ರಿಕಾ ಸೂಚಿ, ಸಂ. ಶ್ರೀನಿವಾಸ ಹಾವನೂರ, ಸಗರಿ, ಬೆಳ್ಳಿ ಹಬ್ಬದ ಸಂಚಿಕೆ. 1974, MGM Udupi ಪನಿಯಾರ, ಸಂ. ಕೆ. ಚಿನ್ನಪ್ಪ ಗೌಡ, ತುಳುಕೂಟ, ಕುಡ್ಲ, 1989

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

85