ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/74

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಯೇನಾ ಹೇಳುವೆನೈಯ್ಯಯ್ಯ ಈ ಮಾನವ ಜನರನ್ನು ಮೆಚ್ಚಿಸಲುಂಟೆ,
ಯೇನ ಹೇಳುವೆನೈಯ್ಯಯ್ಯ
ಮಾತನಾಡದೆ ಮೂಕನಂತಾದರೆ ಮೂಕನೆಂದು ದಿಕ್ಕರಿಸುವರು.
ಚಾತುರ್ಯದಿಂದಲಿ ಮಾತುಗಳಾಡಲು ಆತನೇ ಬಾಯ್ದಡಕನೆಂಬರು'

ಹೀಗೆ ಒಳ್ಳೆ ಮಾತುಗಳಿಂದ ಜನರನ್ನು ಆಕರ್ಷಿಸಿ ಪತ್ರಿಕೆ ಹೊರ ಬರುತ್ತಿತ್ತು. ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರು ಸಮಾಚಾರವಾದರೂ ಇದು ಸ್ವದೇಶದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ಕೃಷ್ಣ ಸೂಕ್ತಿ ಪತ್ರಿಕೆಯಲ್ಲಿ ತಮ್ಮ ಲೇಖನವೊಂದರಲ್ಲಿ ಉಲ್ಲೇಖಿಸಿದ್ದು ಹೀಗೆ, "ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶವಿರುತ್ತಿತ್ತು.

ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ರಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರು ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಭಿನ್ನವಾದ ಶೈಲಿಯಲ್ಲಿ ಬರುತ್ತಿತ್ತು ಎನ್ನುವುದಕ್ಕೆ ಈ ಮೊದಲು ಪತ್ರಿಕೆಗಳಲ್ಲಿ ತಿಳಿದುಕೊಂಡದ್ದೇ ಸಾಕ್ಷಿ. ಮತಪ್ರಚಾರದ ಉದ್ದೇಶಕ್ಕಾಗಿ ಬಂದ ಇವರು ತಮ್ಮ ಚರ್ಚ್ ವಠಾರದಲ್ಲಿ ಅಥವಾ ಕ್ರೈಸ್ತರಾದವರ ಮಧ್ಯೆ ಪ್ರಸಾರಕ್ಕಾಗಿ ತುಲನಾತ್ಮಕ ಅಧ್ಯಯನದಂತ ಕ್ರೈಸ್ತ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆಯೇ ವಿನಾ ಮೊದಲಿನ ಎರಡು ಕನ್ನಡ ಪತ್ರಿಕೆಯಲಿ ಧರ್ಮ ನಿಂದನೆ ಅಥವಾ ತುಲನಾತ್ಮಕ ಅದ್ಯಯನ ವಿಚಾರಗಳನ್ನು ಎಲ್ಲಿಯೂ ಬಳಸಲಿಲ್ಲ. ಇತರ ಧರ್ಮದ ಬಗ್ಗೆ ಪತ್ರಿಕೆಯಲ್ಲಿ ಉಲ್ಲೇಖಿಸುತ್ತಿದ್ದುದು ಹೀಗೆ.

ಮರವು ತನ್ನನ್ನು ಕಡಿಯಬಂದವನ ಮೇಲೆ ನೆರಳನ್ನು ಕೊಡುವುದನ್ನು ಹೇಗೆ ನಿಲ್ಲಿಸುವುದಿಲ್ಲವೋ ಹಾಗೆಯೇ ಸಜ್ಜನರು ಶತ್ರುವೇ ಆಗಿರಲಿ ಮನೆಗೆ ಬಂದರೆ ಅತಿಥ್ಯವನ್ನು ಕೊಡದೇ ಇರುವುದಿಲ್ಲ. ಚಂಡಾಲನ ಮನೆಯಾದರೇನಂತೆ ಚಂದಿರನು ಅಲ್ಲಿಯೂ ಬೆಳಕನ್ನು ನೀಡುತ್ತಾನಷ್ಟೇ. ಹಾಗೆಯೇ ಸಾದು ಜನರು ಗುಣರಹಿತರಲ್ಲಿಯೂ ದಯೆ ತೋರಿಸುತ್ತಾರೆ. ಈ ಭಾವದ ಒಂದು ಪದ್ಯವು ಹಿತೋಪದೇಶದಲ್ಲಿ ಕಂಡುಬರುತ್ತದೆ. ಆ ಶ್ಲೋಕವನ್ನು ಕೊಟ್ಟು ಅದಕ್ಕೆ ಸಮಾನಾಗಿರುವ ಬೈಬಲ್‌ನಲ್ಲಿರುವ ಏಸುವಿನ ಈ ವಾಕ್ಯವನ್ನು ಉದ್ಧರಿಸಲಾಗಿದೆ. "ನಾನು ನಿಮಗೆ ಹೇಳುವುದೇನೆಂದರೆ ಶತ್ರುಗಳಿಗೆ ಪ್ರೀತಿ ಮಾಡಿರಿ ನಿಮಗೆ

62 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...