ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/72

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಚರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ನಂಬಿಸುತ್ತಾರೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳು ಯಂತಾ ಕಾಣುವಷ್ಟರೊಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿಯಾಯ್ತು. ಈ ಪ್ರಕಾರ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಇ ಮನುಷ್ಯರ ಸಮಾಚಾರ ಅಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದುದರಿಂದ ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಸೇರಿಸಬೇಕೆಂಬದಾಗಿ ನಿಶ್ಚಯಿಸಿಯದೆ.
ಮಂಗಳೂರ ಸಮಾಚಾರದ ಕಾಗದದಲ್ಲಿ ಬರಿಯುವ ವರ್ತಮಾನಗಳ ವಿವರದ ಪಟ್ಟಿ.
1. ವೂರ ವರ್ತಮಾನ:- ಸಾವಕಾರರಲ್ಲಿ ಆಗಲಿ ಸರಕಾರ ಚಾಕ್ರಿವಾನಲ್ಲಿ ಆಗಲಿ ಯಾವೊಬ್ಬನು ಬುದ್ಧಿಯಿಂದಲಾದರೂ ಸ್ವಧರ್ಮದಿಂದಲಾದರೂ ವಿಶೇಷವಾದ ಕಾರ್ಯವನ್ನು ಜನರೆಲ್ಲರು ಅದನ್ನು ತಿಳುಕೊಂಡು ಅಂಥವರಿಗೆ ಸ್ವಾಭಿಮಾನ ಕೊಟ್ಟು ಅದೇ ನಡತೆಯನ್ನು ಅಂಗೀಕರಿಸ ಮುಂಕೊಳುವ ಹಾಗೆ ಪ್ರಕಟ ಮಾಡಿವದು. ಯಾರಾದರೊಬ್ಬರು ವಿಶೇಷವಾದ ಅಕ್ರಮವನ್ನು ನಡಿಸಿದರೆ ಅಂಥಾ ವಿಶಯದಲ್ಲಿ ಅಸಹ್ಯವೂ ಭಯವೂ ಜನರೊಳಗೆ ಹುಟ್ಟುವ ಹಾಗೆ ತಿಳಿಸುವುದು.
2. ಸರಕಾರದ ನಿರೂಪಗಳು:-ಮದ್ರಾಸ್ ಗೌರ್ನರ್ ದೊರೆಗಳೂ ಸದ್ರಿ ಬದಾಲತ್ ಕೊಡ್ತ ದೊರೆಗಳೂ ಯೀ ಜಿಲ್ಲಾ ಜಡ್ಜ್ ದೊರೆಗಳೂ ಕೊಡೋಣಾದ ವಿಶೇಷವಾದ ಹುಕುಂಗಳನ್ನು ತಿಳಿಯುವ ಹಾಗೆ ಈ ಕಾಗದದಲ್ಲಿ ಛಾಪಿಸುವುದು.
3. ಸರ್ವರಾಜ್ಯ ವರ್ತಮಾನಗಳು:-ಕಂಪೆನಿಯವರಯ ಬೇರೆ ಬೇರೆ ಸಂಸ್ಥಾನಕ್ಕೆ ಸೈನ್ಯವನ್ನು ಕಳುಹಿಸಿದರೆ ಯುದ್ಧದಲ್ಲಿ ಜಯಾಪಜಯವಾದರೆ ವೊಂದು ದೇಶವನ್ನು ತೆಗೆದುಕೊಂಡರೆ ಹೊಸ ಸಂಸ್ಥಾನವನ್ನು ಸ್ಥಾಪಿಸಿದರೆ ಬೇರೆ ಅರಸರ ಸಂಗಡ ವೊಡಂಬಡಿಕೆ ಮಾಡಿದರೆ ಯೀ ಮೊದಲಾದ ಸಮಾಚಾರಗಳನ್ನು ಶೇರಿದಾಗಲೇ ಯೀ ಕಾಗದದಲ್ಲಿ ಯಿದ್ದಹಾಗೆ ಬರದು ವಿಸ್ತರಿಸುವದು.
4.ನೂತನವಾದ ಆಶ್ಚರ್ಯ ಸುದ್ದಿಗಳು:-ಈ ಹಿಂದೂ ದೇಶದಲ್ಲಾಗಲಿ ವಿಲಾಯತಿಯಲ್ಲಾಗಲಿ ಬೇರೆ ಯಾವ ದೇಶದಲ್ಲಾಗಲಿ ಮನುಷ್ಯರ ಬುದ್ಧಿ ಯುಕ್ತಿ ಶಕ್ತಿಗಳಿಂದಲಾದರೂ ದೇವರ ಚಿತ್ತದಿಂದಾಗಲೂ ಅಪರೂಪ ಒಂದು ಕಾರ್ಯವು ಸಂಭವಿಸಿದರೆ ಅದನ್ನು ತಿಳುಕೊಂಡಾಗಲೇ ಯೀ ಊರಿನವರಿಗೆ ಹೇಳುವದು.


60
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...