ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/32

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಸಂಗೀತ, ತುಳು ಪಠ್ಯ ಪುಸ್ತಕ ಹೀಗೆ ನೂರಾರು ಪುಸ್ತಕಗಳು ಪ್ರಕಟವಾಗುವುದರಿಂದ ತುಳುನಾಡಿನಲ್ಲಿ ತುಳು ಮುದ್ರಣವನ್ನು ಆರಂಭಿಸಿ ತುಳು ಕೃತಿಗಳನ್ನು ಬೆಳಕಿಗೆ ತಂದ ಕೀರ್ತಿ ಬಾಸೆಲ್ ಮಿಶನ್‌ ಪ್ರೆಸ್‌ಗೆ ಸಂದಿದೆ.

ಕನ್ನಡ ಸಾಹಿತ್ಯ ಮತ್ತು ಬಾಸೆಲ್ ಮಿಶನ್:- ಕಲ್ಲಚ್ಚು ಮುದ್ರಣದಿಂದ ಪ್ರಾರಂಭವಾದ ಮುದ್ರಣಾಲಯವು ದಾಸ ಸಾಹಿತ್ಯ, ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ, ಕಿಟ್ಟೆಲ್ ನಿಘಂಟು, ವ್ಯಾಕರಣ, ಕನ್ನಡಪಠ್ಯ, ವ್ಯಾಯಮ, ಆರೋಗ್ಯ, ತೋಟಗಾರಿಕೆ, ಕನ್ನಡ ಶಾರ್ಟ್‌ ಹ್ಯಾಂಡ್, ಹೊಮಿಯೋಪತಿ ಚಿಕಿತ್ಸೆ, ಗಿಡಮೂಲಿಕೆ, ಸಂಗೀತ, ಹೀಗೆ ಎಲ್ಲಾ ವಿಭಾಗಗಳಲ್ಲಿ ಮೊದಲ ಮುದ್ರಕರಾಗಿ ಮೆರೆದ ಬಾಸೆಲ್ ಮಿಶನ್ ಪ್ರೆಸ್ ಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಭಾಗವೇ ಎನ್ನಬಹುದು. ಕನ್ನಡ ಲಿಪಿ ಸುಧಾರಣೆ, ಸುಧಾರಿತ ಅಚ್ಚುಮೊಳೆಗಳ ನಿರ್ಮಾಣ, ದೇಶೀಯ ಚಿತ್ರಕಾರರನ್ನು ಬಳಸಿಕೊಂಡು ಅವರಿಗೆ ಸೂಕ್ತ ತರಬೇತಿಯ ಅನುವು ಮಾಡಿಕೊಟ್ಟು ಅತ್ತಾವರ ಅನಂತಾಚಾರಿಯಂತಹ ಶಿಲ್ಪಿಗಳಿಂದ ಕನ್ನಡ ಮುದ್ರಣದ ಮೊದಲ ತೇರನ್ನು ಎಳೆದವರು ಬಾಸೆಲ್ ಮಿಶನ್‌ನವರು ಎಂದು ಹೇಳಿದರೆ ತಪ್ಪಾಗಲಾರದು. ಡಾ. ಶ್ರೀನಿವಾಸ ಹಾವನೂರರು ತಮ್ಮ ಹೊಸಗನ್ನಡದ ಅರುಣೋದಯ ಪುಸ್ತಕದಲ್ಲಿ ಪ್ರೆಸ್ ಬಗ್ಗೆ ಹೀಗೆ ಬರೆದಿದ್ದಾರೆ. "ಮುದ್ರಣದ ಯಾವ ಅಂಶವನ್ನು ತೆಗೆದುಕೊಂಡರೂ ಬಾಸೆಲ್ ಮಿಶನ್ನಿನವರ ಕಾರವು ಮಹೋನ್ನತವಾಗಿದೆ. ಇಲ್ಲಿ ಮುದ್ರಿತವಾದ ಕೃತಿಗಳ ವೈವಿಧ್ಯವೂ ವಿಸ್ಮಯಜನಕವಾಗಿದೆ. ಹಲವಾರು ಅಂಶಗಳಲ್ಲಿ ಹೊಸ ಕ್ರಮವನ್ನು ರೂಢಿಸಿದೆ. ಪಠ್ಯ ಪುಸ್ತಕ, ಕ್ರೈಸ್ತ ಧರ್ಮದ ಪುಸ್ತಕ, ಅನೇಕ ವ್ಯಾವಹಾರಿಕ ಪುಸ್ತಕಗಳು, ಕರಪತ್ರ, ಪಂಚಾಂಗ, ರೈಲ್ವೆ ವೇಳಾ ಪತ್ರಿಕೆ, ಕೋಷ್ಟಕ, ಇವುಗಳೆಲ್ಲವು ಮೊದಲಿಗೆ ಇಲ್ಲಿಂದಲೇ ಹೊರಬಂದವು. ಈ ಮಿಶನ್ನಿನವರು ಮಾಡ ಹೊರಟ ಇನ್ನೊಂದು ಮಹಾತ್ಕಾರ್ಯವೆಂದರೆ ಕನ್ನಡ ಲಿಪಿ ಸುಧಾರಣೆ", ಕಿಟೆಲ್ ಕೋಶದ ಬಗ್ಗೆ ರಾಮಚಂದ್ರ ಉಚ್ಚಿಲರವರ ಹೇಳಿಕೆಯೊಂದು ಹೀಗಿದೆ. "ಕಿಟ್ಟೆಲ್ ಹುಟ್ಟಿದ್ದೆಲ್ಲಿ? ಒಬ್ಬ ವಿದೇಶೀ ಮಿಶನರಿ ಮನುಷ್ಯ ಮತಪ್ರಚಾರಕ್ಕೆಂದು ಬಂದು ಇಲ್ಲಿನ ಭಾಷೆ ಕಲಿತು ನೂರಾರು ಮಂದಿಯನ್ನು ಕೆಲಸಕ್ಕೆ ಹಚ್ಚಿ ಕಿಟ್ಟೆಲ್ ಕೋಶವನ್ನು ಅಚ್ಚು ಮಾಡಿಸಿಯೇ ಬಿಟ್ಟ, ಎಂದರೆ ಅದಕ್ಕಿಂತ ದೊಡ್ಡ ಆಶ್ಚರ್ಯ ಏನಿದೆ? ಫರ್ಡಿನಂಡ್ ಕಿಟೆಲ್ ಮಹಾಶಯನಿಗೆ ಕನ್ನಡಿಗರು ಸದಾ ಋಣಿಗಳಾಗಿರಬೇಕು. ಆಶ್ಚರ್ಯವೆಂದರೆ ಅದಲ್ಲ, ಇನ್ನೊಂದು ಅಂತಹ ಕೋಶ ಇನ್ನೂ ಹುಟ್ಟಲಿಲ್ಲ. ಅದಕ್ಕೀಗ ನೂರು ವರ್ಷ ತುಂಬಿದೆ. 150 ವರ್ಷಗಳ ಹಿಂದೆ ಕನ್ನಡ ಸೇವೆ ಮಾಡಿದ ಮಿಶನರಿಗಳಿಗೆ ಕನ್ನಡ ಸಾಹಿತ್ಯ ಸಂಪಾದನೆಗೆ ಟ್ಯುಬಿಂಗನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು


20
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...