ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/26

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

& Tract Depository) ಎಂಬ ಹೆಸರಿನೊಂದಿಗೆ ಕಾರ್ಯಾರಂಭ ಮಾಡಿತು. ಇದು ಮಂಗಳೂರಿನ ಬಂದರ್ ಪ್ರದೇಶದಲ್ಲಿತ್ತು. ಅನಂತರ ಹಂಪನಕಟ್ಟೆಗೆ ಸ್ಥಳಾಂತರಗೊಂಡು 1965 ತನಕ ಕಾರ್ಯನಿರ್ವಹಿಸುತ್ತಿತ್ತು. ಇದರಲ್ಲಿ ಪ್ರಕಟಿತ ಪುಸ್ತಕಗಳಲ್ಲದೆ ಬಾಸೆಲ್ ಮಿಶನ್‌ ಪ್ರೆಸ್‌ನಲ್ಲಿ ತಯಾರಾಗುತ್ತಿದ್ದ ಭೂಗೋಳ, ನಕಾಶೆ, ಮುಂತಾದವುಗಳೂ, ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ, ಬರವಣಿಗೆ ಸಾಮಾಗ್ರಿಗಳು, ಶಾಲಾ ಪ್ರಯೋಗ ಶಾಲೆಗೆ ಉಪಯೋಗವಾಗುವ ಲ್ಯಾಬೊರೇಟರಿ ಸಲಕರಣೆಗಳು, ವಿಜ್ಞಾನಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಸಹಾ ಮಾರಾಟ ಮಾಡಲಾಗುತ್ತಿತ್ತು.

1874ರಲ್ಲಿ ಎ.ಸಿ. ಬರ್ನೆಲನ Elements of South Indian Palaeography ಎಂಬ ಭಾಷೆಗಳ ಅರ್ಥಶೋಧನೆಯ ಗ್ರಂಥವೊಂದು ಇಲ್ಲಿ ಮುದ್ರಣಗೊಂಡಿತು. ಈ ಉದ್ದೇಶಕ್ಕಾಗಿಯೇ ಲೆಸ್ಬಿಯನ್ ತಜ್ಞರ ಪ್ರಕಾರ ದೇಶಭಾಷೆಗಳನ್ನೆಲ್ಲಾ ಒಂದೇ ಬರಹದಿಂದ ಛಾಪಿಸುವ ಹಾಗೆ ಪ್ರತ್ಯೇಕ ಉಚ್ಚಾರ ಸೂಚಕ ನಿಶಾನಿಗಳಿರುವ ಅಕ್ಷರಗಳು ರೂಪಿಸಲ್ಪಟ್ಟವು. ಈ ಗ್ರಂಥದ ಮುದ್ರಣದಿಂದ ಬಾಸೆಲ್ ಮಿಶನ್ ಪ್ರೆಸ್ ಅನೇಕ ವಿದೇಶಿಯರ ಮತ್ತು ದೇಶೀಯ ವಿದ್ವಾಂಸರ ಮೆಚ್ಚುಗೆಗೆ ಕಾರಣವಾಯಿತು.

ಪ್ರಕಾಶಕರಾದ ಬೆಂಗಳೂರಿನ ಬ್ರಿಟಿಷ್ ಅಂಡ್ ಫೊರಿನ್ ಬೈಬಲ್ ಸೊಸೈಟಿ, ಅಕ್ಸಿಲರಿ ಬೈಬಲ್ ಸೊಸೈಟಿ, ನಮ್ಮ ಪುಸ್ತಕ ಭಂಡಾರ, ಮದ್ರಾಸಿನ ಗವರ್ನ್ ಮೆಂಟ್ ಆಫ್ ಪೋರ್ಟ್ ಸೈಂಟ್ ಜಾರ್ಜ್, ಆಕ್ಸಫರ್ಡ್ ಯುನಿವರ್ಸಿಟಿ, ಇಂಡಿಯಾ ಸಂಡೆ ಸ್ಕೂಲ್ ಯೂನಿಯನ್, ಮದ್ರಾಸು ಸರಕಾರ, ಸ್ಕೂಲ್ ಬುಕ್ ಅಂಡ್ ವರ್ನಾಕುಲ‌ರ್ ಲಿಟರೇಚರ್ ಸೊಸೈಟಿ, ಮಂಗಳೂರಿನ ಕರ್ನಾಟಕ ಕ್ರಿಶ್ಚನ್ ಕೌನ್ಸಿಲ್, ಸುವಾಸಿನಿ ಪ್ರಕಾಶನ, ಬಾಳಿಗಾ ಅಂಡ್ ಸನ್ಸ್, ನವನಿಧಿ ಕಾರ್ಯಾಲಯ, ಸೊಸೈಟಿ ಆಫ್ ಜೀಸಸ್, ಅಲೈಡ್ ಪಬ್ಲಿಷಿಂಗ್ ಹೌಸ್, ಇಂಡಿಯನ್ ಇಂಡಸ್ಟ್ರೀಸ್ & ಎಜನ್ಸಿಸ್, ಕೆ.ಟಿ.ಎಲ್.ಸಿ. ಸದರ್ನ್ ಡಯಾಸಿಸ್, ಮೈಸೂರಿನ ಎಚ್, ಲಿಂಗಣ್ಣ & ಸನ್ಸ್, ಮೈಸೂರು ಡಯಾಸಿಸ್, ಮುಂಬಯಿಯ ಒರಿಯಂಟಲ್ ಲಾಂಗ್‌ಮನ್, ಮೇಕ್ಕಿಲನ್‌, ಗವರ್ನ್‌ಮೆಂಟ್ ಸೆಂಟ್ರಲ್ ಬುಕ್ ಡಿಪೊ, ಡಿಪಾರ್ಟ್‌ಮೆಂಟ್ ಆಫ್ ಪಬ್ಲಿಕ್ ಇನ್‌ಕ್ಷನ್, ಲಾಂಗ್‌ಮನ್ & ಗ್ರೀನ್, ಪಂಜಾಬಿನ ಸಿ.ಎಮ್.ಎಸ್.ಮಿಶನ್, ಧಾರವಾಡದ ಕನ್ನಡ ಸಾಹಿತ್ಯ ಪ್ರಕಾಶನ, ಶಂಭುರುದ್ರಪ್ಪ ಶಿವರುದ್ರಪ್ಪ ಕುಲಕರ್ಣಿ, ಕರ್ನಾಟಕ ಬುಕ್ ಡಿಪೊ ಮುಂತಾದ ಪ್ರಕಾಶಕರುಗಳಿಗೆ ಸೊಗಸಾದ ಮುದ್ರಣವನ್ನು


14
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...