ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/166

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಇಸವಿಯಿಂದ ವ್ಯವಸಾಯ ತರಬೇತು ಹೊಂದಿದ ಮೇಲ್ವಿಚಾರಕರೊಬ್ಬರನ್ನು ನೇಮಿಸಿದರು. ಅಂದಿನಿಂದ ಈ ಕೃಷಿ ಕ್ಷೇತ್ರವು ಹಣದ ಲಾಭವನ್ನು ಮಾಡಬೇಕೆಂಬ ಒಂದೇ ದೃಷ್ಟಿಯನ್ನು ಇಟ್ಟು ಕ್ರೈಸ್ತರಿಗೂ ಇತರರಿಗೂ ವ್ಯವಸಾಯದ ಶಿಕ್ಷಣವನ್ನು ಕೊಡಬೇಕೆಂಬ ನಿರ್ಣಯವನ್ನು ಮಾಡಿಕೊಂಡಿತು. ವಿವಿಧ ಪೈರುಗಳನ್ನು ಬೆಳೆಸುವುದೂ ವ್ಯವಸಾಯದ ಶಿಕ್ಷಣವನ್ನು ಕೊಡುವುದೂ, ಬಡಕ್ರೈಸ್ತರಿಗೆ ಕೆಲಸ ಕೊಟ್ಟು ಅವರಿಗೊಂದು ಆಶ್ರಯವಾಗುವುದು ಅದರ ಗುರಿ. ಕ್ರೈಸ್ತನಿಗೆ ಬಾಯಿಂದಲ್ಲ ಕಾರ್ಯರೂಪಕವಾಗಿ ಸಾಕ್ಷಿಕೊಡುವುದು. 1929ನೇ ಇಸವಿ ಅಂತ್ಯದ ತನಕ ಈ ಕ್ಷೇತ್ರದ ಆಡಳಿತವನ್ನು ಮಂಗಳೂರು ಬಾಸೆಲ್ ಮಿಶನ್ ಬುಕ್ ಡಿಪೋವಿನವರು ನೋಡಿಕೊಂಡಿದ್ದು 1930ನೇ ಇಸವಿಯ ಆರಂಭದಲ್ಲಿ ಮಿಶನಿಗೆ ಅದನ್ನು ಕೈವರ್ತಿಸಿದರು. ಆ ವರುಷದ ಆರಂಭದಲ್ಲೇ ಒಂದು ಕೃಷಿ ಶಾಲೆಯನ್ನು ತೆರೆಯಲಾಯಿತು. ಪ್ರತಿ ಎರಡುವರೆ ವರುಷಗಳಿಗೊಮ್ಮೆ ನಾಲ್ಕು ಕ್ರೈಸ್ತ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಅವರನ್ನು ಕೃಷಿಯಲ್ಲೂ ಸ್ವಲ್ಪಮಟ್ಟಿಗೆ ದೇವರ ವಾಕ್ಯದಲ್ಲಿಯೂ ತರಬೇತು ಮಾಡಲಾಗುವುದು. (ಕರ್ನಾಟಕ ಕ್ರೈಸ್ತ ಬಂಧು ಅಕ್ಟೋಬರ್ 1934)

ಪರ್ಪಲೆ - 1939ರಲ್ಲಿ ನಡೆದ 2ನೇ ಮಹಾಯುದ್ಧದ ಬಳಿಕ ಮಿಶನರಿಗಳು ಜರ್ಮನಿಗೆ ಹಿಂತಿರುಗಿದಾಗ ಪರ್ಪಲೆ ಬಂಗ್ಲೆ ಜನ ವಸತಿಯಿಲ್ಲದ ಬೀಡಾಯಿತು. 1950ರಲ್ಲಿ ಮುಲ್ಕಿಯಲ್ಲಿದ್ದ ಸಿಸ್ಟರ್ ಹನ್ನ ಎಶಿಮನ್‌ರವರು ಇಲ್ಲಿಗಾಗಮಿಸಿದ ಬಳಿಕ ಇಲ್ಲಿ ವೃದ್ಧರಿಗೆ ಆಶ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು. ದಟ್ಟ ಕಾಡನ್ನು ಕಡಿದು ಹೊಲವನ್ನಾಗಿ ಪರಿವರ್ತಿಸಲಾಯಿತು. ಬಾವಿ, ಮದಗಗಳನ್ನು ತೋಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಯಿತು. ಗುಡ್ಡ ಪ್ರದೇಶದಿಂದ ಹರಿಯುವ ನೀರಿನಲ್ಲಿ ಬರುವ ಸಾರಾಂಶಗಳನ್ನು ಕಣಿವೆಗಳನ್ನು ನಿರ್ಮಿಸಿ ಕಾಪಿಡುವುದು, ಬಾವಿಗೆ ನೀರಿನ ಒಸರು ಬರುವಂತೆ ವ್ಯವಸ್ಥೆ ಮಾಡಿರುವುದನ್ನು ಗಮನಿಸಿದರೆ ಇಂದಿಗೂ ಆಶ್ಚರ್ಯವಾಗುತ್ತದೆ. ನೀರಾವರಿ ಪ್ರದೇಶಗಳನ್ನು ಗುರುತಿಸಿ ಪಡಕೊಳ್ಳುವುದು, ಕುರುಚಲು ಕಾಡಾದರೆ ಅದನ್ನು ಕೃಷಿಗೆ ಯೋಗ್ಯ ಗದ್ದೆಗಳನ್ನಾಗಿ ಪರಿವರ್ತಿಸುವುದು ಅಂದಿನ ಕಾರ್ಯವೈಕರಿಯಾಗಿತ್ತು. ಕಾರ್ತಿ ಮತ್ತು ಸುಗ್ಗಿ ಬೆಳೆಗಳನ್ನು, ದಾನ್ಯ, ತರಕಾರಿ, ಫಲವಸ್ತುಗಳನ್ನು ಬೆಳೆದು ಸ್ವಾವಲಂಬನೆಯತ್ತ ಹೆಜ್ಜೆಯನ್ನಿಡಲಾರಂಭಿಸಿತು. ಮಿಶನರಿಗಳ ಕೃಷಿ ಕ್ಷೇತ್ರದ ಸಾಧನೆಯ ಕುರುಹುಗಳು ಕಾರ್ಕಳ ವ್ಯಾಪ್ತಿಯಿಡೀ, ಬೈಲೂರು ಮಿಶನ್ ಅಸ್ತಿ, ಮೂಡಬಿದ್ರೆ ಫಾರ್ಮ್, ಪಡುಮಾರ್ನಾಡ್ ಆಸ್ತಿ ಹಾಗೂ ಕಾರ್ಕಳ ಬೆಧಾನ್ಯ ದೇವಾಲಯವಿರುವ ಪರ್ಪಲೆ ಗುಡ್ಡೆಯಲ್ಲಿರುವ ಕ್ರಿಸ್ತ ಸೇವಕಿ ಆಶ್ರಮದ ಗದ್ದೆ ಹಾಗೂ ತೋಟಗಳಿಗೆ ನೀರುಣಿಸಲು ಮಾಡಿದ ಸುಮಾರು 10

154

ತುಳುನಾಡಿನಲ್ಲಿ ಬಾಸೆಲ್ ರನ್ ಮತ್ತಿತರ ಲೇಖನಗಳು...