ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/164

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಕ್ರೈಸ್ತ ಕುಟುಂಬಗಳು ಅದನ್ನು ಪರಾಧೀನ ಮಾಡದೇ ಉಳಿಸಿಕೊಂಡಿದ್ದಾರೆ. ಅಲ್ಲಿ ಒಂದು ಪ್ರಾರ್ಥನಾ ಮಂದಿರವೂ ಇದೆ. ಆ ಸಭೆಯ ವ್ಯಾಪ್ತಿಯಾದ ಬೆಂದೂರು, ಮರೋಳಿ, ಮಡಿಕೇರಿಗುಡ್ಡೆ, ನಂತೂರುಗಳಲ್ಲಿ ಹಲವಾರು ಕ್ರೈಸ್ತ ಮನೆಗಳಿವೆ. ಮರೋಳಿಯ ಆಸ್ತಿ ಪರಭಾರೆಯಾಗಿರುತ್ತದೆ..

ಜಪ್ಪು:- 1865ರಲ್ಲಿ ಹಂಚಿನ ಕಾರ್ಖಾನೆ, ಸಭೆ, ಶಾಲೆ ಪ್ರಾರಂಭವಾದರೂ ಹಂಚಿನ ಕಾರ್ಖಾನೆ ಕೋಮನ್‌ ವೆಲ್ತ್ ಪಾಲಾಗಿದೆ. ದೇವಾಲಯದ ಪಕ್ಕದಲ್ಲಿದ್ದ ಎಲ್ಲ ಮಿಶನ್ ವಸತಿಗಳು ಮತ್ತು ಬೋಳಾರ, ಮುಳಿಹಿತ್ತು. ಹೊಸಹಿತ್ತು. ಅತ್ತಾವರ ಮುಂತಾದೆಡೆ ಇರುವ ಕ್ರೈಸ್ತರ ಹೆಚ್ಚಿನ ಮನೆಗಳು ಮಿಶನ್ ಆಸ್ತಿಯಾಗಿದ್ದು ಕೆಲವನ್ನು ಸ್ವಂತ ಮಾಡಿಕೊಂಡಿದ್ದಾರೆ, ಕೆಲವು ನಿವೇಶನಗಳು ಪರಾಬಾರೆಯಾಗಿದೆ..

ಬೈಲೂರು- ಬೈಲೂರು ಮಿಶನ್ ಕೌಂಪೌಂಡ್ ಪರಿಸರದಲ್ಲಿ, ಹಳೆಬೇರು, ಹುಲಿಕಲ್ಲು, ಸುಯಪನೀರು, ಮಾಧವ ಭಟ್ಟ ದರಖಾಸ್ತು, ಪುರ್ಸನ್‌ಜಡ್ಡು ಎಂಬಲ್ಲಿ ಖಾಲಿ ಸ್ಥಳಗಳನ್ನು ಖರೀದಿಸಿ ಗದ್ದೆಗಳನ್ನಾಗಿ ಪರಿವರ್ತಿಸಿ ಘಟ್ಟದ ತೋಟಗಳಿಗೆ ಹೋಗಿ ಮಲೇರಿಯ ಮುಂತಾದ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗದಂತೆ 8- 9 ಕ್ರೈಸ್ತ ಸಂಸಾರಗಳನ್ನು ಇಲ್ಲಿರಿಸಿ ಕೃಷಿ ಕಾರ್ಯಕ್ಕಾಗಿ ಅವರೆಲ್ಲರಿಗೆ ವಸತಿ ಕಲ್ಪಿಸಲಾಗಿತ್ತು. ಗುಡ್ಡೆಗಳನ್ನು ಕಡಿದು ಕೃಷಿಗೆ ಯೋಗ್ಯ ಭೂಮಿಯನ್ನಾಗಿಸಿದರು. ನೀರಾವರಿ ಬೆಳೆ ಬೆಳೆಯುವ ಸ್ಥಳಗಳನ್ನು ಗುರುತಿಸಿ ಬೇಸಾಯ ಮಾಡುವ ಕ್ರಮಗಳನ್ನು ಜಾರಿಗೆ ತಂದರು. ಇದರಿಂದ ಕ್ರೈಸ್ಯತರಿಗೆ ಹಾಗೂ ಪರಿಸರದ ಜನರಿಗೆ ಉದ್ಯೋಗವೂ ದೊರಕಿದಂತಾಯಿತು. 1912ರಲ್ಲಿ ನಡೆದ ಘಟನೆಯೊಂದು ಕೃಷಿಕ್ಷೇತ್ರದಲ್ಲಿ ಮಿಶನರಿಗಳಿಗಿದ್ದ ಆಸಕ್ತಿಯನ್ನು ತಿಳಿಸುತ್ತದೆ. ಬೈಲೂರು ಹಳೆನೀರೆಂಬ ಒಕ್ಕಲಲ್ಲಿ ಸರಿಯಾದ ಒಕ್ಕಲು ಸಿಗದರಿಂದ ಆ ವರ್ಷ ಮಿಶನರಿಯೇ ಮುಂದೆ ನಿಂತು ಸಾಗುವಳಿ ಮಾಡುವ ಪರಿಸ್ಥಿತಿ ಬಂದೊದಗಿತು. ಬಿತ್ತಲಿಕ್ಕೆ ಬೀಜ ಇತ್ತು. ಆದರೆ ಮಳೆ ಬಾರದೇ ಹಾಗೇ ಇತ್ತು.( ರಾತ್ರಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಪರ್ತಾಜೆ ಬಂಗಲೆಯಲ್ಲಿ ಮಲಗಿದ್ದ ರೆವೆ. ಫಿಶರ್‌ರವರು ಮಧ್ಯ ರಾತ್ರಿಯಲ್ಲಿಯೇ ಕುದುರೆ ಗಾಡಿಯೇರಿ 11 ಮೈಲು ಪಯಣಿಸಿ ಉಳುವವರನ್ನ ಎಬ್ಬಿಸಿ ಕರಕೊಂಡು ಹೋಗಿ ಉಜ್ಜಿ ಉತ್ತಿ ಬಿತ್ತಿ ಬೆಳಗಾಗುವುದರೊಳಗೆ ಬಂಗಲೆಗೆ ವಾಪಾಸು ಬಂದು ಮಲಗಿದರಂತೆ.ಬೆಳಿಗ್ಗೆ ಎದ್ದು ಹೇಳಿದಾಗಲೇ ಪರ್ಪಲೆಯವರಿಗೆ ಸುದ್ದಿ ತಿಳಿದು ಮಾರು ಅಲ್ಲ ಕ್ರುತಿ ಮಾಡಿದ ಮಿಶನರಿಯವರ ಕಾರ್ಯವನ್ನು ನೋಡಿ ಆಶ್ಛರ್ಯಪಟ್ಟರಂತೆ.

152

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು