ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/143

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಕಾಣಬಹುದು. ರಾಬರ್ಟ್ ಕಾಲ್ಸ್‌ವೆಲ್, ವಿಲಿಯಂ ಕೇರಿ, ಎ. ಸಿ. ಬರ್ನೆಲ್, ಸಿ.ಜೆ. ಬೆಸ್‌ಜಿ, ಜಾನ್ ಮೆಕೆರಲ್, ಎಫ್ ಸ್ತ್ಟ್ರಿಂಗ್, ಬಿ. ಗ್ರೇಟರ್, ಥಾಮ್ಸನ್ ಹಡ್ಸ್ನ್, ಜೆ. ಗ್ಯಾರೆಟ್, ಎಫ್ ಜೀಗ್ಲರ್, ಹೆರಾಲ್ಡ್ ಸ್ಪೆನ್ಸರ್, ವಿಲಿಯಂ ರೀವ್, ಜೆ. ಬುಚರ್, ಇ.ಪಿ. ರೈಸ್, ಪಿ ಪರ್ಸಿವಲ್, ಹೆರ್ಮನ್ ಗುಂಡರ್ಟ್, ಜಾನ್ ಜೇಮ್ಸ್ ಬ್ರಿಗೆಲ್, ಫರ್ಡಿನಾಂಡ್ ಕಿಟೆಲ್, ಅಗಸ್ಟ್ ಮೆನ್ನರ್ ಮುಂತಾದವರುಗಳು ವಿದೇಶಿಯರಾದರೂ ನಮ್ಮ ದೇಶಕ್ಕೆ ಬಂದು ಇಲ್ಲಿನ ಭಾಷೆ ಕಲಿತು ಇಲ್ಲಿನ ಭಾಷೆಗಳಾದ ಕನ್ನಡ, ಮಲಯಾಲಂ, ತುಳು, ತಮಿಳು ಮೊದಲಾದ ಭಾಷೆಗಳಿಗೆ ನಿಘಂಟು ವ್ಯಾಕರಣಗಳನ್ನು ಮಾಡಿರುವುದು ಸಾಧನೆಯೇ ಆಗಿವೆ.

ಪ್ರಸ್ತುತ ವಿಶ್ವವಿದ್ಯಾಲಯ ಮಟ್ಟದಲ್ಲಿ ಭಾಷಾ ಚರಿತ್ರೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಾ ಬಂದಿವೆ. ಸ್ವಾತಂತ್ರ್ಯ ಪೂರ್ವ ಪಠ್ಯಗಳನ್ನು ನಾವು ಅವಲೋಕಿಸುವುದಾದರೆ ಭಾಷೆಯ ಬಗ್ಗೆ ಬೇಕಾದಷ್ಟು ಮಾಹಿತಿಗಳು ದೊರೆಯುತ್ತವೆ. ಈ ಲೇಖನದಲ್ಲಿ ಸ್ವಾತಂತ್ರ್ಯಪೂರ್ವ ಪಠ್ಯಗಳಲ್ಲಿ ಭಾಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪಾಠ ಇತ್ತು, ಹೇಗೆ ಭಾಷೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು ಎನ್ನುವುದಕ್ಕೆ ಪಠ್ಯದಿಂದ ಆಯ್ದ ಕೆಲವು ಉದಾಹರಣೆಗಳ ಮಾದರಿಯನ್ನು ಇಲ್ಲಿ ನೀಡಲಾಗಿದೆ. ಸುಮಾರು 80 ವರ್ಷ ಬಳಕೆಯಲ್ಲಿದ್ದ ಕನ್ನಡ ಪಠ್ಯವಾದ್ದರಿಂದ ಓದುವಾಗ ತಪ್ಪಿದೆ ಎಂದು ಭಾವಿಸದೆ, ಓದುವಾಗ ತೊಂದರೆಯಾದರೂ ಅದರ ಮೂಲದಲ್ಲಿದ್ದಂತೆ ಇಲ್ಲಿ ಕೊಡಲಾಗಿದೆ. ಉದಾ: ಹಿಂದುಸ್ಥಾನ, ತೆಲಗು, ದ್ರವಿಡ ಇತ್ಯಾದಿ.

ಹಿಂದೂಸ್ತಾನದ ಭಾಷೆಗಳು:- ನಮ್ಮ ದೇಶದಲ್ಲಿ ಅನೇಕ ಕುಲದ ಜನರು ವಾಸಿಸುತ್ತಿದ್ದು, ಅವರು ಬೇರೆ ಬೇರೆ ಭಾಷೆಗಳನ್ನು ಆಡುತ್ತಾರೆ. ಖಾನೇಶುಮಾರಿಯಿಂದ ದೇಶೀಯ ಭಾಷೆಗಳು 147 ಇರುತ್ತವೆಂದು ಗೊತ್ತಾಗಿದೆ.ಭಾಷಾಶಾಸ್ತ್ರಜ್ಞರು ಇವುಗಳೊಳಗಿನ ತಿದ್ದುಪಡಿ ಹೊಂದಿದ ಭಾಷೆಗಳನ್ನು ಪರೀಕ್ಷಿಸಿ ಅವುಗಳಲ್ಲಿ ನಾಲ್ಕು ವರ್ಗ ಮಾಡಿದ್ದಾರೆ ಹ್ಯಾಗಂದರೆ 1. ಸಂಸ್ಕೃತಕ್ಕೆ ಸಂಬಂಧಿಸಿದ ಭಾಷೆಗಳು 2. ಪಾರಸಿ- ಅರಬೀ ಭಾಷೆಗಳಿಗೆ ಸಂಬಂಧಿಸಿದ ಭಾಷೆಗಳು, 3. ದ್ರಾವಿಡ ಭಾಷೆಗಳು. 4. ಚೀನಿ, ತಿಬೇಟಿ ಭಾಷೆಗಳಿಗೆ ಸಂಬಂಧಿಸಿದ ಭಾಷೆಗಳು. ಜನಸಂಖ್ಯೆ, ವಿಸ್ತಾರ, ಗ್ರಂಥಸಮೂಹ, ಇವುಗಳಿಂದ ನೋಡಲಾಗಿ ನಾಲ್ಕು ವರ್ಗಗಳಲ್ಲಿ ಮೊದಲನೇ ವರ್ಗದ ಭಾಷೆಯು ಬಹು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು

131