ಈ ಪುಟೊದ ಪರಿಶೀಲನೆ ಆತ್‍ಂಡ್
ದಾಖಲೀಕರಣಕ್ಕೆ ಹೆಚ್ಚಿಗೆ ಒತ್ತು ನೀಡುತ್ತಿದ್ದ ಹಾವನೂರರವರು ತಾವು
ಜೀವಮಾನವಿಡೀ ಸಂಗ್ರಹಿಸಿದ್ದ ಅಮೂಲ್ಯ ಗ್ರಂಥಗಳನ್ನು ಮಂಗಳೂರಿನ ಕರ್ನಾಟಕ
ತಿಯೊಲಾಜಿಕಲ್ ಕಾಲೇಜ್, ಸಂತ ಅಲೋಸಿಯಸ್ ಕಾಲೇಜು, ಮಂಗಳೂರು
ವಿಶ್ವವಿದ್ಯಾನಿಲಯ, ಬೆಂಗಳೂರಿನ ಮಿಥಿಕ್ ಸೊಸೈಟಿ ಬೆಂಗಳೂರು, ಉಡುಪಿಯ
ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮುಂತಾದ ಕಡೆಗೆ ದಾನವಾಗಿ
ನೀಡಿದ್ದು ಮಾತ್ರವಲ್ಲದೆ ಈ ಶಿಕ್ಷಣ ಕೇಂದ್ರಗಳಿಗೆ ದಾಖಲೀಕರಣಕ್ಕೆ ನೇರ ಸಹಕಾರ
ನೀಡಿರುವರು.
ಗ್ರಂಥ ಸಂರಕ್ಷಣೆ, ದಾಖಲೀಕರಣ, ಗ್ರಂಥ ಮಾರ್ಗದರ್ಶನ, ಗ್ರಂಥಕ್ಕಾಗಿ
ದುಡಿಯುವುದು ಇವೇ ಗ್ರಂಥಪಾಲಕನ ಗುಣಗಳೆನ್ನುತ್ತಿದ್ದ ಡಾ. ಹಾವನೂರರ ಈ
ಮಾತುಗಳು ಈಗ ನೆನಪಿನಲ್ಲಿ ಮಾತ್ರ.
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..
113