ನಯವತಿ – ಸತ್ಯವತಿಯು, ಪತಿ ಸುತರೊಡ-
ಗೂಡುತ ಬಂದಳು, ಗುಣವಂತೆ
ಸೇವಕರೆಂದರು, ಮನೆಯವರೆಂದರು,
ಸೋದರ ಕೊರಗುವ ಕಾರಣವ
ತೆರದಲಿ, ಸಲಿಸದೆ ನರಬಲಿ
ಹಾಸಿಗೆ ಹಿಡಿದಿಹನೆಂದರು
ತನ್ನೊಡಹುಟ್ಟಿದ ಸೋದರ ಹೃದಯವು
ಮರುಗುತಲಿರುವುದ ನೋಡಿದಳು;
ತನ್ನೊಡಲಿನ ಮಿದು ಕರುಳೇ ಕರಗಿತು!
ಅಣ್ಣಗೆ ಬಿನ್ನಹ ಮಾಡಿದಳು -
“ಏಳೆನ್ನಗ್ರಜ! ನೀನಿದಕೀಪರಿ
ಮರುಗಲು ಬೇಕೇ? ಬಿಡು ಚಿಂತೆ,
ಕೇಳೆನ್ನಯ ಮಗನನು ನಾನೀವೆನು,
ಭೂತಕೆ ನರಬಲಿ ಸಲುವಂತೆ.”
ಸವಿಜೇನಿನ ಮಳೆ ಸುರಿದಂತಾಯಿತು
ತಂಗಿಯ ನುಡಿಗಳಿವನು ಕೇಳಿ!
ಬುವಿಯಲಿ ನಮ್ಮೊಡಹುಟ್ಟುಗಳಲ್ಲವೆ
ಕಷ್ಟಕೊದಗುವರು ನಿತ್ಯದಲಿ?
“ನನ್ನೀ ಕಾರ್ಯಕೆ ನನ್ನಯ ಸುತರನೆ
ಕೈಹಿಡಿದಾಕೆಯು ಕೊಡಲಿಲ್ಲ!
ನಿನ್ನೊಬ್ಬನೆ ಮಗನಿವನನು ನೀಡುವೆ !
ಭಾವ ಕೋಪಿಸನೆ? ಇದು ಸಲ್ಲ!”
“ನಮ್ಮೊಳು ಭೇದಗಳಿತ್ತೇ ಸುಖದಲಿ?
ದುಃಖದಿ ತೊಲಗುವೆವೇ ಹೇಳು?
ಸಮ್ಮತಿ ಪಡೆದೇ ಬಂದಿಹೆ ಸೋದರ,
ಉಮ್ಮಳವನು ಬಿಡು ಬೇಗೇಳು”
4
ಸತ್ಯವತಿಯು ತನ್ನಯ ಸುತ ಜಯನನು
ಮೀಯಿಸಿ ತಂದಳು ಶುಚಿಯಾಗಿ;
ಕಯ್ಯಾರೆರ್ನ ಕಬಿತೆಲು / 45