ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೫೬

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಭೂತಾಳಪಾಂಡ್ಯ

     ಸಾವಿರ ವರ್ಷದ ಹಿಂದಕೆ ನಡೆಯಿತು
     ಕತೆಯೊಂದನು ಹೇಳುವೆ ಕಂದ;
     ಯಾವನ ಕಾಲದಿ, ಯಾತಕೆ ಹುಟ್ಟಿತು,
     ಅಳಿಯಕಟ್ಟೆನುತ – ತಿಳಿ ಚಂದ.

     ಪಾಂಡ್ಯದೇಶದಲ್ಲಿ ವರ್ತಕನಿದ್ದನು
     ದೇವಪಾಂಡ್ಯ ಬಲು ಸಿರಿವಂತ;
     ತಂಡತಂಡದಲಿ ಹಡಗವ ಸಾಗಿಸಿ
     ದುಡ್ಡು ಗಳಿಸಿದನು ಗುಣವಂತ

     ಮನ್ನಣೆ ಸಂಪದವೆಲ್ಲವು ಹೆಚ್ಚಿತು
     ವ್ಯಾಪಾರದಿ ಗೆಲವಾಗುತಿರೆ;
     ಸಣ್ಣ ಹಡಗಗಳು ಸಾಲದೆ ಹೋಗಲು
     ದೊಡ್ಡದು ಕಟ್ಟಿಸೆ ಮನತೋರೆ –

     ಮರಗಳ ತರಿಸಿದ ಶಿಲ್ಪಿಯ ಕರೆಸಿದ
     ಕೂಲಿಗಳೆಲ್ಲರ ಕೂಡಿಸಿದ;
     ಭರದಲಿ ಹಡಗದ ಕೆಲಸವ ಮುಗಿಸಿದ,
     ವೆಚ್ಚವ ಗಣಿಸದೆ ಮಾಡಿಸಿದ.

     2
     ಕೇಳಿ ಮುಹೂರ್ತವ ಜೋಯಿಸರಲ್ಲಿಯೆ
     ದಿನ ತಿಥಿಯೆಲ್ಲವು ಶುಭವಿರಲು,
     ತಾಳುತ ಸಂಭ್ರಮ, ಸಂತಸದಲ್ಲಿಯೆ,
     ನೀರಿಗೆ ಹಡಗವನಿಳಿಸಿರಲು -
     ಆಹಾ! ಅಚ್ಚರಿ! ಏನದು ಶಬ್ದವು?
     ಕೇಳಿದರೆಲ್ಲರು ನಡನಡುಗಿ !
     “ಓಹೋ! ನಿಲ್ಲಲಿ! ನರಬಲಿ ಸಲ್ಲಲಿ!”
     ದನಿಯೊಂದೆದ್ದಿತು! ಗುಡು ಗುಡುಗಿ!

     ಸಿಡಿಲೇ ಹೊಡೆದಂತಾಯಿತು ಪಾಂಡ್ಯಗೆ,
     “ಬಲಿಯನು ಕೊಡುವುದೆ ಯಾರನ್ನು?

ಕಯ್ಯಾರೆರ್ನ ಕಬಿತೆಲು / 43