ವಿಷಯಕ್ಕೆ ಹೋಗು

ಪುಟ:ರಾಷ್ಟ್ರಕವಿ ಗೋವಿಂದ ಪೈ.pdf/೪೫

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಭೈರವ ಬಂಗರ ಚೌಟರಜಿಲ ಸಾಮಂತರ ಮನೆಮನೆಯಿಂಬೇ,
ತುಳುವರ ತಾಯ್ಮನೆಯುಳಿದರ ಕಾಯ್ಮನೆ ನೀನೆಮ್ಮಯ ಮನೆಯಂಬೇ ॥2॥

ದೇಗುಲಗಳೊ ಧರ್ಮದ ಬಾಗಿಲಗಳೊ? ಪುಣ್ಯ ಘಟಂ ತಟಿನೀತಟಂ
ಬಸದಿಗಳೋ ಕನಸೇ ಕಲ್ಲಾದುವೊ? ನೆಲಬಿರಿದೆದ್ದರೆ ಗೊಮ್ಮಟಂ?
ನಿನ್ನ ಪುಲಕವೇ ಸಸುರಿದಂತೆ ಪಸರಿಸಿದೀ ಸಸ್ಯದ ಚೆಲುವೇಂ!
ಜೀವನ ಸಾಮವನಾಡುವ ಪಾಡುವ ಖಗಮೃಗಪತಂಗದೊಲವೇಂ! ॥3॥

ಹಿಂದು ಜೈನ ಮುಸ್ಲೀಮ ಕ್ರೈಸ್ತರಾವೊಂದೇ ಬಾಂಧವರೆಮ್ಮಾ
ತಂದೆ ದೇವರೊಬ್ಬನೇ, ನೀನೊಬ್ಬಳೆ ನಮ್ಮೆಲ್ಲರ ತಾಯಮ್ಮಾ!
ಎಂದಿನಳೊ ನೀನಿಂದಿನವರೆ ನಾವಾದೊಡೆಮ್ಮನಕ್ಕರೆಯಿಂ
ನಿನ್ನೆದೆ ತೊಟ್ಟಿಲೊಳಿಟ್ಟು ಸಾಕುತಿಹೆ, ಸರಸಿಯಂತೆ ತಾವರೆಯಂ ॥4॥

ಧನ್ಯವೆನಿತೋ ನಾ ನಿನ್ನಯ ಬಸುರಿಂದುಸುರಿಸಲೀ ಹೂವನ್ನ!
ಕೆಸರೊಳುದುರಲೀಯದೆ, ನಿನ್ನಡಿಗರ್ಪಿಸಿಕೊಳು ಸೌಸವವನ್ನ!
ಬೇಡುವೆನವ್ವಾ, ಬೀಳ್ಕೊಡುವಂದೆನ್ನನೆತ್ತಿದಂಕದಿ ನಿನ್ನ,
'ಮರಳಿ ಬಾರ, ಕಂದಾ, ನನ್ನುದರದಿ' ಎಂದು ತಬ್ಬಿ ಹರಸೆನ್ನ! ॥5॥


ಪರಾಮರ್ಶನ ಗ್ರಂತೊಲು

01. ಗೋವಿಂದ ಪೈ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ- 570006, 1983
02. ಕಿಲ್ಲೆ (ಎನ್.ಎಸ್.ಕಿಲ್ಲೆ ಶತಮಾನೋತ್ಸವ ಸಂಸ್ಮರಣ ಗ್ರಂಥ) ದೇಶಭಕ್ತ ಎನ್‌.ಎಸ್‌.ಕಿಲ್ಲೆ ಶತಮಾನೋತ್ಸವ ಸಮಿತಿ ಅಂಚೆ: ಕೆದಂಬಾಡಿ -574210. ಪುತ್ತೂರು, 2000
03. ಕಿಲ್ಲೆ ಕೃತಿ ಸಂಚಯ, ದೇಶಭಕ್ತ ಎನ್.ಎಸ್.ಕಿಲ್ಲೆ ಶತಮಾನೋತ್ಸವ ಸಮಿತಿ ಅಂಚೆ:ಕೆದಂಬಾಡಿ - 574210 ಪುತ್ತೂರು ತಾಲೂಕು, 2000
04. ಗೋವಿಂದ ಪೈ ಸಂಸ್ಕೃತಿ ಲೋಕ (ಸಂಕಿರಣದ ಲೇಖನಗಳು) ಪ್ರಧಾನ ಸಂಪಾದಕ

ಪ್ರೊ. ಕೆ. ಈ. ರಾಧಾಕೃಷ್ಣ, ವಸಂತ ಪ್ರಕಾಶನ, ಜಯನಗರ, ಬೆಂಗಳೂರು

05. ತುಳು ನಾಡು-ನುಡಿ, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್‌, ಕರ್ನಾಟಕ ಸಂಘ

ಪುತ್ತೂರು - 574202, 1999

06. ಗೋವಿಂದ ಪೈ ಸ್ಮೃತಿ-ಕೃತಿ, ಕಯ್ಯಾರ ಕಿಞ್ಞಣ್ಣ ರೈ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ, 1983
07. ಗೋವಿಂದ ಪೈ ಶತಮಾನ ಸ್ಮರಣೆ ಸಂಪಾದಕ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1984

ರಾಷ್ಟ್ರಕವಿ ಗೋವಿಂದ ಪೈ / 36