ಈ ಪುಟೊನು ಪ್ರಕಟಿಸದ್ ಆಂಡ್
ಅರಮನೆಯಾನೆಯ ಕೈಯ್ಯಲಿ, ಮಾಲೆಯ -
ನಿತ್ತರು ಸತ್ಯದ ನೆಲೆ ತಿಳಿದೇ!
ಮಾಲೆಯನೆತ್ತುತ ಮದಗಜ ಹೊರಟಿತು,
ಕೇರಿಕೇರಿಗಳನಲೆದಾಡಿ;
ಲೀಲೆಯೊಳಿಕ್ಕಿತು ಪಾಂಡ್ಯನ ಕೊರಳಿಗೆ
ಮಾಲೆಯನಾತನ ಗುಣ ನೋಡಿ!
ಜಯಪಾಂಡ್ಯನು ಸಿರಿಪಟ್ಟದಿ ಕುಳಿತನು
ತುಳುನಾಡಿನ ದೊರೆಯೆನಿಸಿದನು;
ಯಾವೆಡೆಯಲ್ಲಿಯು ಸುಖವೆಲ್ಲೆಲ್ಲಿಯು
ದಾನ ಧರ್ಮಗಳ ನಡೆಸಿದನು
ಅಳಿಯನು ಮಾವನ ಸೊತ್ತನು ಪಡೆದಾ
ಕತೆಯನ್ನು ಪ್ರಜೆಗಳು ಕೇಳಿದರು;
ತಿಳಿದರು ಸತ್ಯವ, ಪ್ರೀತಿಯ ತತ್ತ್ವವ
ಅಳಿಯಕಟ್ಟಿನೊಳೆ ಬಾಳಿದರು.
ಕಯ್ಯಾರೆರ್ನ ಕಬಿತೆಲು / 47